ನ.27ರಂದು ‘ಬಿಎಂಎಸ್ ಅಲ್ಯುಮಿನಿ ಕೂಟ’ದ ವಾರ್ಷಿಕ ಸಂಭ್ರಮ
ನ.27ರಂದು ‘ಬಿಎಂಎಸ್ ಅಲ್ಯುಮಿನಿ ಕೂಟ’ದ ವಾರ್ಷಿಕ ಸಂಭ್ರಮ
ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ, ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆಯ ಸಾರ್ಥಕ ಕ್ಷಣಗಳು...
ಪ್ರತಿವರ್ಷ ನವಂಬರ್, ಡಿಸೆಂಬರ್ ಹತ್ತಿರವಾಗುತ್ತಿರುವಂತೆ ಬಿಎಂಎಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳಲ್ಲಿ ಮಧುರ ನೆನಪೊಂದು, ನಿರೀಕ್ಷೆಯಾಂದು ಕುಡಿಯಾಡೆಯತೊಡಗುತ್ತದೆ. ಅವರೆಲ್ಲ ವರ್ಷಾಂತ್ಯದ ವಾರ್ಷಿಕ ಸಂಭ್ರಮಕ್ಕೆ ಕಾಯತೊಡಗುತ್ತಾರೆ. ಈ ಬಾರಿ ನವಂಬರ್ 27ರ ಶನಿವಾರ ಬಿಎಂಸ್ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ.
‘ಬಿಎಂಎಸ್ ಅಲ್ಯುಮಿನಿ ಕೂಟ’ದ ನವಂಬರ್ 27ರ ಕಾರ್ಯಕ್ರಮಕ್ಕೆ ಎರಡು ಬಗೆಯ ವಿಶೇಷ. ಮೊದಲನೆಯದಾಗಿ ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರುವ ಸ್ನೇಹಮಿಲನದ ಸಂಭ್ರಮ. ಎರಡನೆಯದು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ ಸಾರ್ಥಕತೆ.
ಬಿಎಂಎಸ್‌ಸಿಎ-ಎಎಎ, ಬಿಎಂಎಸ್‌ಸಿಇ (ಬೆಂಗಳೂರು), ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ನ.27ರ ಕಾರ್ಯಕ್ರಮವನ್ನು ಜಂಟಿಯಾಗಿ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದತ್ತಿನಿಧಿ ಉಪನ್ಯಾಸವನ್ನು ವಿವೇಕಾನಂದ ಯೋಗ ಮಹಾವಿದ್ಯಾಪೀಠದ ಉಪ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ನೀಡುವರು. ನಾಗೇಂದ್ರ ಅವರು ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಹೌದು.
2004-05ರ ಸಾಲಿನ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದು , 25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು.
ಕಾಲೇಜೊಂದು ತನ್ನ ಶೈಕ್ಷಣಿಕ ಚೌಕಟ್ಟನ್ನು ಮೀರಿ ಕೌಟುಂಬಿಕ ಹಾಗೂ ಸಾಮಾಜಿಕ ಚೌಕಟ್ಟನ್ನು ಪಡೆದುಕೊಳ್ಳುವುದು ಇಂಥ ಕಾರ್ಯಕ್ರಮಗಳಿಂದಲೇ. ಬಿಎಂಎಸ್ ಅಲ್ಯುಮಿನಿ ಕೂಟದ ಚಟುವಟಿಕೆಗಳು ಇತರ ಕಾಲೇಜುಗಳಿಗೂ ಮಾದರಿ ಆಗಬಾರದೇಕೆ? ಹಾಗಾಗಲೆಂದು ಆಶಿಸೋಣ.
ಮುಖಪುಟ / ವಾರ್ತೆಗಳು












Click it and Unblock the Notifications