ಸರ್ಕಾರ ಉಳಿಸಿಕೊಳ್ಳಲು ತಿಣುಕುತ್ತಿರುವ ಧರಂ ಗೋಳಿಗೆ ‘ಬಂ’ ಕನಿಕರ
ಸರ್ಕಾರ ಉಳಿಸಿಕೊಳ್ಳಲು ತಿಣುಕುತ್ತಿರುವ ಧರಂ ಗೋಳಿಗೆ ‘ಬಂ’ ಕನಿಕರ
ಸಂಪುಟ ವಿಸ್ತರಣೆ ಮಾಡುವುದನ್ನೇ ಸಮ್ಮಿಶ್ರಸರಕಾರ ಸಾಧನೆ ಎಂದು ಭಾವಿಸಿದೆ
ವಿಜಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಸಂಪುಟ ವಿಸ್ತರಣೆ ಮಾಡುವುದನ್ನೇ ಸಾಧನೆ ಎಂದು ಭಾವಿಸಿದೆ. ಸಂಪುಟ ವಿಸ್ತರಣೆ ಆನೆ ಹೊಟ್ಟೆಯ ಕತೆಯಂತಿದೆ ಎಂದರು.
ಆನೆ ಗರ್ಭ ಧರಿಸಲಿ, ಧರಿಸದೇ ಹೋಗಲಿ ಅದರ ಹೊಟ್ಟೆ ಇದ್ದಷ್ಟೇ ಗಾತ್ರ ಇರುತ್ತದೆ. ಆದರೆ ಜನರು ಮಾತ್ರ ಆನೆ ಗರ್ಭ ಧರಿಸಿದೆ ಎಂದು ನಂಬಿರುತ್ತಾರೆ ಎಂದು ಸರಕಾರದ ಕಾರ್ಯವೈಖರಿಯನ್ನು ವ್ಯಂಗ್ಯವಾಗಿ ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವರ್ತನೆ ಗಮನಿಸಿದರೆ ಚುನಾವಣೆ ಸಮೀಪದಲ್ಲಿಯೇ ಇದೆ ಎನ್ನುವ ಸಂಶಯ ಬಲವಾಗುತ್ತದೆ. ಸರಕಾರ ಉಳಿಸಿಕೊಳ್ಳಲು ಕಸರತ್ತು ನಡೆಸಿರುವ ಮುಖ್ಯಮಂತ್ರಿ ಧರ್ಮಸಿಂಗ್ ಗೋಳನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಬಂಗಾರಪ್ಪ ಅನುಕಂಪ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications