ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ; ಶ್ರೀಕಂಠಯ್ಯಗೆ ನೋಟಿಸ್‌ ಜಾರಿ

ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟ; ಶ್ರೀಕಂಠಯ್ಯಗೆ ನೋಟಿಸ್‌ ಜಾರಿ
ಪೂಜಾರಿ ವಿರುದ್ಧದ ಶ್ರೀಕಂಠಯ್ಯನವರ ಹೇಳಿಕೆಗೆ ಕೆಪಿಸಿಸಿ ಕೆಂಡ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಪೇಪರ್‌ ಹುಲಿಯಂತೆ ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರ ಮಾತು ಯಾಕೋ ಸ್ವಲ್ಪ ಅತಿಯಾಯಿತು ಎನ್ನುವ ಅಪಸ್ವರ ಜೆಡಿಎಸ್‌-ಬಿಜೆಪಿ ಜೊತೆಗೆ ಕಾಂಗ್ರೆಸ್‌ ಪಕ್ಷದಲ್ಲೇ ಕೇಳಿ ಬರುತ್ತಿದೆ.

ಪೂಜಾರಿ ಬಗೆಗೆ ಟೀಕೆ ಮಾಡಿದ ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕಂದಾಯ ಸಚಿವ ಎಚ್‌. ಸಿ.ಶ್ರೀಕಂಠಯ್ಯನವರಿಗೆ ಕೆಪಿಸಿಸಿ ಇದೀಗ ಶೋಕಾಸ್‌ ನೋಟೀಸ್‌ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಶ್ರೀಕಂಠಯ್ಯನವರು ಓರ್ವ ಆಕಾಂಕ್ಷಿಯಾಗಿದ್ದು , ಪ್ರಸ್ತುತ ನೋಟಿಸ್‌ ಪಡೆದಿರುವ ಅವರ ಮುಂದಿನ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪಕ್ಷದ ವೇದಿಕೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಚರ್ಚಿಸುವುದು ಬಿಟ್ಟು ಮಾಧ್ಯಮಗಳ ಮೂಲಕ ಕೆಂಡಕಾರಿರುವುದರಿಂದ ಕಾಂಗ್ರೆಸ್‌ಗೆ ಮುಜುಗರವಾಗಿದೆ. ಶ್ರೀಕಂಠಯ್ಯನವರ ಧೋರಣೆ ಸರಿಯಲ್ಲ ಎಂದು ಕೆಪಿಸಿಸಿ ಖಂಡಿಸಿದೆ. ನೋಟೀಸ್‌ಗೆ ಉತ್ತರ ನೀಡಲು ಹದಿನೈದು ದಿನ ಸಮಯ ನೀಡಲಾಗಿದೆ. ಪ್ರತಿ ಸ್ಪಂದನದ ಮೇಲೆ ಮುಂದಿನ ಕ್ರಮ ನಿರ್ಧಾರವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಿನ್ನೆಲೆ : ಚನ್ನರಾಯಪಟ್ಟಣದ ಸಂತೆಶಿವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶ್ರೀಕಂಠಯ್ಯ, ಕೆಪಿಸಿಸಿ ಅಧ್ಯಕ್ಷರ ವರ್ತನೆಯನ್ನು ಟೀಕಿಸಿದ್ದರು.

ಜೆಡಿಎಸ್‌ ವಿರುದ್ಧ ಪೂಜಾರಿ ನೀಡಿರುವ ಹೇಳಿಕೆ ವೈಯುಕ್ತಿಕವೇ ಹೊರತು, ಪಕ್ಷದ್ದಲ್ಲ. ಇಲ್ಲಸಲ್ಲದ ಬೇಜವಬ್ದಾರಿ ಹೇಳಿಕೆ ನೀಡುತ್ತಿರುವ ಪೂಜಾರಿ ಮೇಲೆ ಹೈಕಮಾಂಡ್‌ ಶಿಸ್ತು ಕ್ರಮ ಕೈಗೊಳ್ಳಬೇಕು. ಪೂಜಾರಿಯನ್ನು ಕೂಡಲೇ ಕೆಪಿಸಿಸಿ ಪದವಿಯಿಂದ ವಜಾಮಾಡಬೇಕು ಎಂದು ಶ್ರೀಕಂಠಯ್ಯ ಆಗ್ರಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+