ಅವಿರತ ದುಡಿಮೆ, ಮಾನವತೆಯನ್ನು ಮೈಗೂಡಿಸಿಕೊಳ್ಳಿ -ಪ್ರಧಾನಿ ಕರೆ
ಅವಿರತ ದುಡಿಮೆ, ಮಾನವತೆಯನ್ನು ಮೈಗೂಡಿಸಿಕೊಳ್ಳಿ -ಪ್ರಧಾನಿ ಕರೆ
ಸರ್ವ ಧರ್ಮಗಳನ್ನು ಸಮಭಾವದಿಂದ ಕಾಣುವ ಮನೋಭಾವ ಎಲ್ಲರದಾಗಲಿ
ಮಾನವತೆಯನ್ನು ಮೈಗೂಡಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು. ಅವಿರತವಾಗಿ ದುಡಿಯುವ ಮೂಲಕ ಬಡವರು ಮತ್ತು ತಳವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ಗುರು ತೇಜ್‌ಬಹದ್ದೂರ್‌ರ ಹುತಾತ್ಮ ದಿನದಂದು (ನ.24, ಬುಧವಾರ) ಪ್ರಧಾನಿ ಮನಮೋಹನ್ ಸಿಂಗ್ ದೇಶದ ಜನತೆಗೆ ಕರೆ ನೀಡಿದರು.
ಸರ್ವ ಧರ್ಮಗಳನ್ನು ನಾವೆಲ್ಲರೂ ಸಮಭಾವದಿಂದ ನೋಡಬೇಕಿದೆ. ಗುರು ತೇಜ್‌ಬಹದ್ದೂರ್ ಪ್ರತಿಪಾದಿಸಿದ ತಾಳ್ಮೆ, ಸಹಿಷ್ಣುತೆ, ಅವಿರತ ದುಡಿಮೆಗಳು ಸರ್ವವ್ಯಾಪಿಯಾಗಬೇಕು ಎಂದು ಮನಮೋಹನ್‌ಸಿಂಗ್ ಆಶಿಸಿದರು.
ತೇಜ್‌ಬಹದ್ದೂರ್‌ರ ಹುತಾತ್ಮ ದಿನ ಸಹಿಷ್ಣುತೆ ಹಾಗೂ ತ್ಯಾಗ ಮನೋಭಾವವನ್ನು ಜನತೆಯಲ್ಲಿ ಮೂಡಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಬಲಪಡಿಸುವಂತಾಗುವ ಕುರಿತು ಪ್ರಧಾನಿ ಭರವಸೆ ವ್ಯಕ್ಪಡಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications