‘ಕನಕಪುರದಿ ರೈತರು ಆತ್ಮಹತ್ಯೆಮಾಡಿಕೊಂಡಾಗ ಗೌಡ ಕ್ಯಾರೆ ಎನ್ನಲಿಲ್ಲ’

‘ಕನಕಪುರದಿ ರೈತರು ಆತ್ಮಹತ್ಯೆಮಾಡಿಕೊಂಡಾಗ ಗೌಡ ಕ್ಯಾರೆ ಎನ್ನಲಿಲ್ಲ’
ಮಾಜಿ ಪ್ರಧಾನಿ ವಿರುದ್ಧ ಕನಕಪುರ ಸಂಸದೆ ತೇಜಸ್ವಿನಿ ಟೀಕಾ ಪ್ರಹಾರ

ಬೆಂಗಳೂರು : ತಮಗೆ ರಾಜಕೀಯ ಪುನರ್ಜನ್ಮ ನೀಡಿದ ಕನಕಪುರ ಲೋಕಸಭಾ ಕ್ಷೇತ್ರದ ಮತದಾರರನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಸಂಸದೆ ತೇಜಸ್ವಿನಿ ಶ್ರೀರಮೇಶ್‌ ಆಪಾದಿಸಿದ್ದಾರೆ.

ರಾಜಕೀಯವಾಗಿ ಸೊರಗಿಹೋಗಿದ್ದ ದೇವೇಗೌಡರಿಗೆ ಕನಕಪುರದ ಜನತೆ ಪುನರ್ಜನ್ಮ ನೀಡಿದರು. ಆದರೆ ಕನಕಪುರದ ಸಂಸದರಾಗಿದ್ದಾಗ ಕ್ಷೇತ್ರದಲ್ಲಿ 15 ರೈತರು ಆತ್ಮಹತ್ಯೆ ಮಾಡಿಕೊಂಡರೂ ದೇವೇಗೌಡರು ತಿರುಗಿ ನೋಡಲಿಲ್ಲ , ಬದಲಿಗೆ ನತದೃಷ್ಟ ಕುಟುಂಬದ ಸದಸ್ಯರನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿ ಮಾಡಿ ಸಾಂತ್ವನ ಹೇಳಿದರು ಎಂದು ತೇಜಸ್ವಿನಿ ಶ್ರೀರಮೇಶ್‌ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಸನ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್‌ ಒದಗಿಸಲು ದೇವೇಗೌಡರು ಆಸಕ್ತರಾಗಿದ್ದಾರೆ ; ಕನಕಪುರದ ಬಗೆಗೆ ಅವರಿಗೆ ಯಾವ ಕಾಳಜಿಯೂ ಇಲ್ಲ ಎಂದು ತೇಜಸ್ವಿನಿ ಕಟಕಿಯಾಡಿದ್ದಾರೆ.

(ಇನ್ಫೋ ವಾತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+