ನವಂಬರ್ ಅಂತ್ಯದೊಳಗೆ ‘ಧರ್ಮಸಿಂಗ್ ಸಂಪುಟ’ ವಿಸ್ತರಣೆ ಖಚಿತ !
ನವಂಬರ್ ಅಂತ್ಯದೊಳಗೆ ‘ಧರ್ಮಸಿಂಗ್ ಸಂಪುಟ’ ವಿಸ್ತರಣೆ ಖಚಿತ !
ಸೋನಿಯಾಗಾಂಧಿ ಹಸಿರು ನಿಶಾನೆಗಾಗಿ ಎರಡು ದಿನಗಳ ದೆಹಲಿ ಯಾತ್ರೆ
ಸಂಪುಟ ವಿಸ್ತರಣೆಯ ದಿನಾಂಕ ತಿಳಿಸಲು ನಿರಾಕರಿಸಿದ ಮುಖ್ಯಮಂತ್ರಿ, ಮಾಸಾಂತ್ಯದಲ್ಲಿ ಸಂಪುಟ ವಿಸ್ತರಣೆ ನಡೆಯುವುದು ಖಚಿತ ಎಂದರು. ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿಯವರಿಂದ ಹಸಿರು ನಿಶಾನೆ ಪಡೆಯಲು ಎರಡು ದಿನಗಳ ದೆಹಲಿ ಯಾತ್ರೆ ಕೈಗೊಳ್ಳಲು ಉದ್ದೇಶಿಸಿರುವುದಾಗಿಯೂ ಮಂಗಳವಾರ ಸುದ್ದಿಗಾರರಿಗೆ ಮುಖ್ಯಮಂತ್ರಿ ತಿಳಿಸಿದರು.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್‌ರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಮಾತುಕತೆ ನಡೆಸಿದ್ದಾರೆ. ಅತಿಶೀಘ್ರದಲ್ಲಿ ಸಂಪುಟ ವಿಸ್ತರಿಸುವಂತೆ ಜಾತ್ಯತೀತ ಜನತಾದಳ ತಿಳಿಸಿದೆ ಎಂದೂ ಧರ್ಮಸಿಂಗ್ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications