ಕಂಚಿ : ಮೃತ ಶಂಕರರಾಮನ್ ಕುಟುಂಬಕ್ಕೆ 5 ಲಕ್ಷ ರು. ನೆರವು -ಜಯಾ
ಕಂಚಿ : ಮೃತ ಶಂಕರರಾಮನ್ ಕುಟುಂಬಕ್ಕೆ 5 ಲಕ್ಷ ರು. ನೆರವು -ಜಯಾ
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಬಿಡುಗಡೆ
ಶಂಕರರಾಮನ್‌ರ ವಿಧವೆ ಪದ್ಮಾ ಅವರು ಹಣಕಾಸಿನ ನೆರವು ಕೋರಿದ್ದರು. ತಮ್ಮ ಕುಟುಂಬ ಬಡತನ ಅನುಭವಿಸುತ್ತಿದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎನ್ನುವ ಪದ್ಮಾರ ಕೋರಿಕೆಯನ್ನು ಮನ್ನಿಸಿ ಐದು ಲಕ್ಷ ರುಪಾಯಿಗಳ ನೆರವು ನೀಡಲಾಗುವುದು. ಈ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ನ.22ರ ಸೋಮವಾರ ವಿಧಾನಸಭೆಯಲ್ಲಿ ಜಯಲಲಿತಾ ಪ್ರಕಟಿಸಿದರು.
ಕಳೆದ ಸೆ.3ರಂದು ಶಂಕರರಾಮನ್ ಕೊಲೆ ಕಂಚಿ ದೇಗುಲ ಸಮುಚ್ಛಯದ ಆವರಣದಲ್ಲಿ ನಡೆದಿತ್ತು . ಈ ಕೊಲೆಯಲ್ಲಿ ಕೈವಾಡವಿದೆ ಎನ್ನುವ ಆರೋಪದಲ್ಲಿ ಕಂಚಿ ಮಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರನ್ನು ಬಂಧಿಸಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications