ಬಿ.ಟಿ. ಹತ್ತಿಯ ಬಿತ್ತಿ 1600 ಕೋಟಿ ಬೆಲೆಯ ರಾಸಾಯಿನಿಕಗಳ ಉಳಿಕೆ

ಬಿ.ಟಿ. ಹತ್ತಿಯ ಬಿತ್ತಿ 1600 ಕೋಟಿ ಬೆಲೆಯ ರಾಸಾಯಿನಿಕಗಳ ಉಳಿಕೆ
ದೇಶದ ಹತ್ತಿ ಉತ್ಪಾದನೆಯಲ್ಲಿ ಪ್ರಸಕ್ತ ವರ್ಷ ಶೇ. 20 ರಷ್ಟು ಹೆಚ್ಚಳ

ಬೆಂಗಳೂರು: ಪ್ರಸಕ್ತ ಸಾಲಿನ ಮಳೆ ಭರವಸೆ ತಂದಿದ್ದು, ದೇಶದಲ್ಲಿನ ಹತ್ತಿ ಉತ್ಪಾದನೆ ಶೇ.20 ರಷ್ಟು ಹೆಚ್ಚಳವಾಗಿದೆ. ರಾಸಾಯನಿಕಗಳ ಬಳಕೆ ಅಗತ್ಯವಿಲ್ಲದ ಬಿ.ಟಿ. ಹತ್ತಿ ಬೆಳೆಯನ್ನು ಕೃಷಿಕರು ಬೆಂಬಲಿಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಶರದ್‌ಪವಾರ್‌ ತಿಳಿಸಿದರು.

ನಗರದ ಜೈನ್‌ ಶಿಕ್ಷಣ ಸಂಸ್ಥೆಗಳ ಒಕ್ಕೂಟದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಗುಜರಾತ್‌, ಮಧ್ಯಪ್ರದೇಶ, ಪಂಜಾಬ್‌ ಮತ್ತಿತರ ರಾಜ್ಯಗಳಲ್ಲಿ ರೈತರು ಬಿ.ಟಿ. ಹತ್ತಿ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ ಎಂದರು.

ಜೈವಿಕ ತಂತ್ರಜ್ಞಾನದ ಬಿ.ಟಿ. ಹತ್ತಿಯ ವಂಶವಾಹಿ ಬೀಜಗಳಲ್ಲೇ ರೋಗನಿರೋಧಕ ಶಕ್ತಿ ಇದೆ. ಹೀಗಾಗಿ ಬೆಳೆಗಾರರು ರಾಸಾಯನಿಕಗಳನ್ನು ಸಿಂಪಡಿಸುವ ಅಗತ್ಯವೇ ಇಲ್ಲ. ಬಿ.ಟಿ. ಹತ್ತಿಯ ಪರಿಣಾಮ ರಾಷ್ಟ್ರದಲ್ಲಿ 1600 ಕೋಟಿ ರೂ. ಮೌಲ್ಯದ ಕ್ರಿಮಿನಾಶಕಗಳ ಉಳಿತಾಯವಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ನಗರದ ಬಯೋಕಾನ್‌ ಸಂಸ್ಥೆ ಅಪ್ರತಿಮ ಸಾಧನೆ ಮಾಡಿದೆ ಎಂದು ಶರದ್‌ಪವಾರ್‌ ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+