ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಯಾಬಿಟಿಸ್‌,ರಕ್ತದೊತ್ತಡ, ಹೈಟೆನ್ಷನ್‌ಗೆ ‘ಹಿಪ್ಪುನೇರಳೆ ಚಹಾ’ ಮದ್ದು

By Staff
|
Google Oneindia Kannada News

ಡಯಾಬಿಟಿಸ್‌,ರಕ್ತದೊತ್ತಡ, ಹೈಟೆನ್ಷನ್‌ಗೆ ‘ಹಿಪ್ಪುನೇರಳೆ ಚಹಾ’ ಮದ್ದು
ಹಿಪ್ಪುನೇರಳೆಯ ‘ಸ್ಫೂರ್ತಿ’ ಆರೋಗ್ಯದಾಯಕ ಪಾನೀಯ ಮಾರುಕಟ್ಟೆಗೆ

ಮೈಸೂರು: ಹಿಪ್ಪು ನೇರಳೆ ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಪೂರಕ. ಹಿಪ್ಪು ನೇರಳೆ ಚಹಾ ಡಯಾಬಿಟೀಸ್‌, ಹೈಟೆನ್ಷನ್‌, ರಕ್ತದೊತ್ತಡ ಮತ್ತಿತರ ರೋಗಗಳನ್ನು ನಿಯಂತ್ರಿಸುವಲ್ಲಿ ಸಹಕಾರಿ ಎನ್ನುವುದನ್ನು ಕೇಂದ್ರ ಸಿಲ್ಕ್‌ಬೋರ್ಡ್‌ ಸಾಬೀತು ಪಡಿಸಿದೆ.

ಹಿಪ್ಪುನೇರಳೆ ಎಲೆಗಳನ್ನು ಬಳಕೆ ಮಾಡಿರುವ ಸ್ಫೂರ್ತಿ ಎನ್ನುವ ಹೊಸ ಆರೋಗ್ಯ ಪಾನೀಯವನ್ನು ಕೇಂದ್ರ ರೇಷ್ಮೆ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿತು. ಮೈಸೂರು ಮೂಲದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಕೇಂದ್ರ ಈ ಪಾನೀಯವನ್ನು ಸಿದ್ಧಪಡಿಸಿದೆ.

ಹಿಪ್ಪು ನೇರಳೆ ರೇಷ್ಮೆ ಉದ್ಯಮಕ್ಕೆ ಮಾತ್ರವಲ್ಲದೇ, ತನ್ನ ಔಷಧೀಯ ಗುಣಗಳಿಂದ ರೈತನಿಗೆ ಸಹಕಾರಿಯಾಗಿದೆ. ರೈತರು ಆದಾಯ ತರುವ ಹಿಪ್ಪು ನೇರಳೆ ಕೃಷಿಯತ್ತ ಗಮನಹರಿಸಲು ಇದು ಪರ್ವಕಾಲ. ಹಿಪ್ಪು ನೇರಳೆ ಬಗೆಗೆ ಮತ್ತಷ್ಟು ಅಧ್ಯಯನಗಳು ನಡೆಯುತ್ತಿವೆ.

ಈ ಪಾನೀಯ ಜೀರ್ಣಕ್ರಿಯೆ ವೃದ್ಧಿಗೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಡಯಾಬಿಟೀಸ್‌, ರಕ್ತದೊತ್ತಡ, ಹೈಟೆನ್ಷನ್‌ಗೆ ರಾಮಬಾಣ ಎಂದು ಅಧ್ಯಯನಗಳು ತಿಳಿಸಿವೆ. ಜಪಾನ್‌, ಚೈನಾ, ಥೈಲಾಂಡ್‌ ಮತ್ತು ಸೌತ್‌ ಕೊರಿಯಾದಲ್ಲಿ ಈ ಪಾನೀಯಗಳು ಬಳಕೆಯಲ್ಲಿದೆ. ಹಿಪ್ಪು ನೇರಳೆಯಿಂದ ಚಾಕಲೇಟ್‌, ಬಿಸ್ಕತ್‌ ಸೇರಿದಂತೆ 93 ಬಗೆಯ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X