ಪರಿಸರವಾದಿ ವಂದನಾ ಶಿವರಿಗೆ ಮುರುಘ ಮಠದ ‘ಬಸವಶ್ರೀ’ ಪ್ರಶಸ್ತಿ
ಪರಿಸರವಾದಿ ವಂದನಾ ಶಿವರಿಗೆ ಮುರುಘ ಮಠದ ‘ಬಸವಶ್ರೀ’ ಪ್ರಶಸ್ತಿ
ಡಿಸೆಂಬರ್ 5ರಂದು ಚಿತ್ರದುರ್ಗದಲ್ಲಿ ಪ್ರಶಸ್ತಿ ಪ್ರದಾನ
ಚಿತ್ರದುರ್ಗ : ಇಲ್ಲಿನ ಮುರುಘರಾಜೇಂದ್ರ ಬೃಹನ್ಮಠದ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ಖ್ಯಾತ ಪರಿಸರವಾದಿ ಡಾ. ವಂದನಾ ಶಿವ ಅವರನ್ನು ಆಯ್ಕೆ ಮಾಡಲಾಗಿದೆ.
ಬಸವಶ್ರೀ ಪ್ರಶಸ್ತಿ 1 ಲಕ್ಷ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಡಿಸೆಂಬರ್ 5ರಂದು ಪ್ರಶಸ್ತಿ ಪ್ರದಾನ ಸಮಾರಂಭ ಚಿತ್ರದುರ್ಗದಲ್ಲಿ ನಡೆಯಲಿದೆ ಎಂದು ಬೃಹನ್ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ತಿಳಿಸಿದ್ದಾರೆ.
ವಂದನಾಶಿವ ಅವರ ಪರಿಸರ ಕಾಳಜಿ ಹಾಗೂ ಹೋರಾಟವನ್ನು ಗುರ್ತಿಸಿ ಬಸವಶ್ರೀ ಪ್ರಶಸ್ತಿ ನೀಡಲಾಗುತ್ತಿದೆ. ತಮ್ಮ ಹೋರಾಟದ ಬದುಕಿನ ಮೂಲಕ ವಂದನಾ ಶಿವ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ ಎಂದು ಶಿವಮೂರ್ತಿ ಶರಣರು ಬಣ್ಣಿಸಿದ್ದಾರೆ.
ಕಳೆದ ವರ್ಷ ಬಸವಶ್ರೀ ಪ್ರಶಸ್ತಿಯನ್ನು ಆಂಧ್ರದ ನಕ್ಸಲ್ ಚಿಂತನೆಯ ನಾಯಕ ಗದ್ದರ್ ಅವರಿಗೆ ನೀಡಲಾಗಿತ್ತು . ಗದ್ದರ್ ಅವರಿಗೆ ಬಸವಣ್ಣನವರ ಹೆಸರಿನ ಪ್ರಶಸ್ತಿ ನೀಡಿದ್ದ ವಿಷಯ ವಿವಾದಕ್ಕೆ ಕಾರಣವಾಗಿತ್ತು .
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications