ನ್ಯಾಯಾಂಗ ವಶದಿಂದ ಮೂರು ದಿನದ ಪೊಲೀಸ್‌ ಕಸ್ಟಡಿಗೆ ಕಂಚಿಶ್ರೀ

ನ್ಯಾಯಾಂಗ ವಶದಿಂದ ಮೂರು ದಿನದ ಪೊಲೀಸ್‌ ಕಸ್ಟಡಿಗೆ ಕಂಚಿಶ್ರೀ
3 ದಿನಗಳ ಕಾಲ ಪೋಲೀಸ್‌ ಕಸ್ಟಡಿಯಲ್ಲಿ ಹೆಚ್ಚಿನ ವಿಚಾರಣೆ-ಕಾಂಚೀಪುರಂ ಕೋರ್ಟ್‌

Shankaracharya remanded to three days police custodyಕಾಂಚೀಪುರಂ: ಕೊಲೆ ಆರೋಪದ ಮೇಲೆ ಬಂಧಿಸಲಾಗಿರುವ ಕಂಚಿ ಶ್ರೀ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರನ್ನು ಮೂರುದಿನಗಳ ಕಾಲ ಪೋಲೀಸ್‌ ಕಸ್ಟಡಿಗೆ ಶುಕ್ರವಾರ(ನ.19) ನ್ಯಾಯಾಲಯ ಒಪ್ಪಿಸಿದೆ.

ಕಾಂಚೀಪುರಂ ನ್ಯಾಯಾಲಯದಲ್ಲಿ ಪೋಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಮೊದಲ ದರ್ಜೆಯ ನ್ಯಾಯಾಧೀಶ ಜಿ. ಉತ್ತಮ್‌ರಾಜ್‌, ನ್ಯಾಯಾಂಗ ಬಂಧನದಲ್ಲಿರುವ ಶ್ರೀಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೋಲೀಸ್‌ ವಶಕ್ಕೆ ನೀಡಲು ಸಮ್ಮತಿಸಿ ಆದೇಶ ನೀಡಿದರು.

ಶುಕ್ರವಾರ ಮಧ್ಯಾಹ್ನ 12.05 ರಿಂದ ನ. 22 ರ ಸೋಮವಾರ ಬೆಳಗ್ಗೆ 10.30 ರವರೆಗೆ ಶ್ರೀಗಳನ್ನು ಪೋಲೀಸ್‌ ವಶಕ್ಕೆ ಒಪ್ಪಿಸಲಾಗಿದೆ. ಆಂಧ್ರ ಪ್ರದೇಶದ ಮೆಹಬೂಬ್‌ ನಗರದಲ್ಲಿ ನ.11 ರಂದು ಶಂಕರಾಚಾರ್ಯರನ್ನು ಬಂಧಿಸಲಾಗಿತ್ತು. ಸೆ.3 ರಂದು ನಡೆದಿದ್ದ ಕಂಚಿ ದೇವಸ್ಥಾನದ ಅಧಿಕಾರಿ ಶಂಕರರಾಮನ್‌ ಕೊಲೆಗೆ ಸಂಬಂಧಿಸಿದಂತೆ ಹದಿನೆಂಟು ಮಂದಿ ಆರೋಪಿಗಳನ್ನು ಪೋಲೀಸರು ಗುರ್ತಿಸಿದ್ದಾರೆ. ಆರೋಪಿಗಳು ನೀಡಿರುವ ಸಾಕ್ಷ್ಯದ ಮೇಲೆ ಶ್ರೀಗಳನ್ನು ಬಂಧಿಸಲಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+