ಪೋಲೀಸ್ ವಶಕ್ಕೆ ಕಂಚಿ ಶ್ರೀ-ರಾಷ್ಟ್ರದೆಲ್ಲೆಡೆ ಬಿಜೆಪಿಯಿಂದ ಪ್ರತಿಭಟನೆ
ಪೋಲೀಸ್ ವಶಕ್ಕೆ ಕಂಚಿ ಶ್ರೀ-ರಾಷ್ಟ್ರದೆಲ್ಲೆಡೆ ಬಿಜೆಪಿಯಿಂದ ಪ್ರತಿಭಟನೆ
ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿಕಟ್- ಸುಷ್ಮಾಸ್ವರಾಜ್
ಶುಕ್ರವಾರ(ನ.19) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರೆ ಸುಷ್ಮಾ ಸ್ವರಾಜ್, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ವೈಯುಕ್ತಿಕ ಕಾರಣಗಳಿಂದ ಶ್ರೀಗಳನ್ನು ಹಿಂಸೆಗೆ ಗುರಿಪಡಿಸಿದ್ದಾರೆ. ಹೀಗಾಗಿ ಬಿಜೆಪಿ ಎಐಎಡಿಎಂಕೆ ಜೊತೆಗಿನ ಎಲ್ಲಾ ಮೈತ್ರಿಯನ್ನು ಮುರಿದುಕೊಳ್ಳುತ್ತಿದೆ ಎಂದರು.
ತಮಿಳುನಾಡಿನ ಎಐಎಡಿಎಂಕೆ ಸರಕಾರ ಸ್ವಾಮೀಜಿಯವರನ್ನು ಬಂಧಿಸಿ, ಪೋಲೀಸ್ ಕಸ್ಟಡಿಗೆ ಒಪ್ಪಿಸುವ ಮೂಲಕ ಹಿಂದು ಜನಾಂಗವನ್ನು ಗೇಲಿ ಮಾಡಿದೆ. ರಾಷ್ಟ್ರದ ಕೋಟ್ಯಾಂತರ ಜನರ ಮನಸ್ಸುಗಳು ನೊಂದಿವೆ. ಕೊಲೆ ಮೊಕದ್ದಮೆಯಲ್ಲಿ ಶ್ರೀಗಳು ಅಪರಾಧಿಗಳೆಂದು ಘೋಷಣೆಯಾಗಿಲ್ಲ, ಅವರು ಕೇವಲ ಆರೋಪಿಗಳು ಮಾತ್ರ ಎನ್ನುವುದನ್ನು ಜಯಲಲಿತಾ ಮರೆಯ ಬಾರದು. ತಮಿಳುನಾಡು ಸರಕಾರದ ಕ್ರಮವನ್ನು ಬಿಜೆಪಿ ವಿರೋಧಿಸುತ್ತದೆ ಎಂದರು.
ಪ್ರತಿಭಟನೆ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ ಬಿಜೆಪಿ ಮುಖಂಡರು ಸಭೆ ನಡೆಸಿದರು. ಶ್ರೀಗಳು ಪೋಲೀಸ್ ವಶದಲ್ಲಿರುವ ಮೂರು ದಿನಗಳ ಕಾಲ ರಾಷ್ಟ್ರದೆಲ್ಲೆಡೆ ಬಿಜೆಪಿ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲು ಉದ್ದೇಶಿಸಿದೆ.
ದೆಹಲಿಯ ಪಟೇಲ್ ಚೌಕ್‌ನಲ್ಲಿ ಶನಿವಾರ(ನ.20) ಬಿಜೆಪಿ ಅಧ್ಯಕ್ಷ ಎಲ್.ಕೆ. ಆಡ್ವಾಣಿ, ಉಪವಾಸ ಧರಣಿಗೆ ಚಾಲನೆ ನೀಡುವರು. ಸೋಮವಾರ(ನ.22) ಧರಣಿಯ ಮುಕ್ತಾಯ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಪಾಲ್ಗೊಳ್ಳುವರು ಎಂದು ಸುಷ್ಮಾಸ್ವರಾಜ್ ತಿಳಿಸಿದ್ದಾರೆ.
(ಏಜನ್ಸೀಸ್)
ವಾರ್ತಾಸಂಚಯ
ನ್ಯಾಯಾಂಗ ವಶದಿಂದ ಮೂರು ದಿನದ ಪೊಲೀಸ್ ಕಸ್ಟಡಿಗೆ ಕಂಚಿಶ್ರೀ
ಮುಖಪುಟ / ವಾರ್ತೆಗಳು












Click it and Unblock the Notifications