ಸಭಾ ಮರ್ಯಾದೆ ಮೀರಿದ್ದಕ್ಕೆ ಉಮಾಭಾರತಿ ಖೇದ ; ಅಡ್ವಾಣಿಗೆ ಪತ್ರ
ಸಭಾ ಮರ್ಯಾದೆ ಮೀರಿದ್ದಕ್ಕೆ ಉಮಾಭಾರತಿ ಖೇದ ; ಅಡ್ವಾಣಿಗೆ ಪತ್ರ
ನ.30 ರೊಳಗೆ ಭಾರತೀಯ ಜನತಾ ಪಕ್ಷದಲ್ಲಿ ಮರಳಿ ಉಮಾ ‘ಭಾರ’ತಿ ?
ಸಭಾ ಮರ್ಯಾದೆಯನ್ನು ಮೀರಿ ಪಕ್ಷದ ಮುಖಂಡರನ್ನು ಪೇಚಿಗೆ ಸಿಲುಕಿಸಿದ ಬಗೆಗೆ ಖೇದ ವ್ಯಕ್ತಪಡಿಸಿರುವ ಉಮಾಭಾರತಿ, ತಮ್ಮ ವರ್ತನೆಗೆ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಬದರಿನಾಥದಲ್ಲಿ ನೆಲಸಿರುವ ಉಮಾಭಾರತಿ ಅಲ್ಲಿಂದಲೇ ಪತ್ರ ಕಳುಹಿಸಿರುವುದು ನಿಜ ಎಂದು ಆಡ್ವಾಣಿ ಸಹಾಯಕರಾದ ದೀಪಕ್ ಛೋಪ್ರಾ ಸ್ಪಷ್ಟ ಪಡಿಸಿದ್ದಾರೆ.
ನ.10 ರಂದು ನಡೆದ ಬಿಜೆಪಿ ಮುಖಂಡರ ಸಭೆಯಿಂದ ಸವಾಲು ಹಾಕುವಂತೆ ಸಭಾತ್ಯಾಗ ಮಾಡಿದ ಕೆಲವೇ ನಿಮಿಷಗಳಲ್ಲಿ ಉಮಾ ಪ್ರಾಥಮಿಕ ಸದಸ್ಯತ್ವವನ್ನು ಅಮಾನತ್ತುಗೊಳಿಸಲಾಗಿತ್ತು. ಬಹುಶಃ ನವೆಂಬರ್ 30 ರೊಳಗೆ ಉಮಾ ಭಾರತಿ ಮತ್ತೆ ಬಿಜೆಪಿ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications