ಕಾಸರಗೋಡು ನಮ್ಮದು -ಕೇರಳ ; ಬೆಳಗಾವಿ ನಮ್ಮದು- ಮಹಾರಾಷ್ಟ್ರ
ಕಾಸರಗೋಡು ನಮ್ಮದು -ಕೇರಳ ; ಬೆಳಗಾವಿ ನಮ್ಮದು- ಮಹಾರಾಷ್ಟ್ರ
ಮಹಾಜನ್ ವರದಿ ಶಿಫಾರಸ್ಸು ಮುಗಿದ ಅಧ್ಯಾಯ, ಕೋರ್ಟ್‌ನಲ್ಲೀಗ ಗಡಿ ತಂಟೆ
ನಗರದಲ್ಲಿ ಸುದ್ದಿಗಾರರೊಂದಿಗೆ ಬಧವಾರ ಮಾತನಾಡಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕಾಸರಗೋಡು ಕೇರಳದ ಅವಿಭಾಜ್ಯ ಅಂಗ. ಹೀಗಾಗಿ ಅದರ ಅಭಿವೃದ್ಧಿಗೆ ಕೇರಳ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.
ಕಾಸರಗೋಡು ಕರ್ನಾಟಕ್ಕೆ ಸೇರಬೇಕೆಂದು ಮಹಾಜನ್ ಆಯೋಗದ ವರದಿ ಶಿಫಾರಸ್ಸು ಮಾಡಿದೆ. ಆದರೆ ಅದೀಗ ಮುಗಿದ ಅಧ್ಯಾಯ ಎಂದರು.
ಈ ಬಗೆಗೆ ದನಿ ಸೇರಿಸಿದ ಮಹಾರಾಷ್ಟ್ರದ ಹಣಕಾಸು ಸಚಿವ ಜಯಂತ ಪಾಟೀಲ, ಮಹಾಜನ್ ವರದಿ ಇಂದು ಪ್ರಸ್ತುತವಾಗುವುದಿಲ್ಲ. ಅದು ಏನೇ ಹೇಳಲಿ ಬೆಳಗಾವಿ ಬಗೆಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಅದನ್ನು ಸುಪ್ರಿಂ ಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದೇವೆ ಎಂದರು. ಬೆಳಗಾವಿ ವಿಷಯ ಸುಪ್ರಿಂಕೋರ್ಟ್‌ನಲ್ಲಿರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಜಯಂತ ಪಾಟೀಲ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications