Get Updates
Get notified of breaking news, exclusive insights, and must-see stories!

‘ಆರ್ಟ್‌ ಆಫ್‌ ಲಿವಿಂಗ್‌’ನಿಂದ ಉದ್ಯಮಪತಿಗಳಿಗೆ ಅಧ್ಯಾತ್ಮ ಸಮ್ಮೇಳನ

‘ಆರ್ಟ್‌ ಆಫ್‌ ಲಿವಿಂಗ್‌’ನಿಂದ ಉದ್ಯಮಪತಿಗಳಿಗೆ ಅಧ್ಯಾತ್ಮ ಸಮ್ಮೇಳನ
ನ.19ರಿಂದ 21ರವರೆಗೆ ಬೆಂಗಳೂರಿನಲ್ಲಿ ಉದ್ಯಮ ಸಂಸ್ಕೃತಿ ಮತ್ತು ಅಧ್ಯಾತ್ಮ

ಬೆಂಗಳೂರು : ಅಂತರರಾಷ್ಟ್ರೀಯ ಖ್ಯಾತಿಯ ಶ್ರೀ ರವಿಶಂಕರ್‌ರ ‘ಆರ್ಟ್‌ ಆಫ್‌ ಲಿವಿಂಗ್‌’ ಸಂಸ್ಥೆ ಉದ್ಯಮಿಗಳಿಗಾಗಿ ಆಧ್ಯಾತ್ಮ ಸಮ್ಮೇಳನವನ್ನು ಏರ್ಪಡಿಸಿದೆ. ನ.19ರಿಂದ 21ರವರೆಗೆ ಬೆಂಗಳೂರಿನಲ್ಲಿ ಈ ವಿಶಿಷ್ಟ ಸಮ್ಮೇಳನ ನಡೆಯಲಿದೆ.

ಉದ್ಯಮಿಗಳಲ್ಲಿ ಕರ್ತವ್ಯ ನಿಷ್ಠೆಯನ್ನು ಜಾಗೃತಗೊಳಿಸುವುದು ಹಾಗೂ ಆಧ್ಯಾತ್ಮ ತಿಳಿವಳಿಕೆ ನೀಡುವುದು ಈ ಸಮ್ಮೇಳನದ ಉದ್ದೇಶ. ಸುಮಾರು 58 ದೇಶಗಳ ಸಾವಿರಾರು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸುವರು ಎಂದು ಸಮ್ಮೇಳನದ ಸಂಘಟನೆಯ ನೇತೃತ್ವ ವಹಿಸಿರುವ ಬ್ರಿಟಾನಿಯಾ ಬಳಗದ ಮುಖ್ಯ ನಿರ್ವಹಣಾಧಿಕಾರಿ ನಿಖಿಲ್‌ ಸೇನ್‌ ತಿಳಿಸಿದ್ದಾರೆ. ಅಂದಹಾಗೆ, ಈ ಸಮ್ಮೇಳನದ ಹೆಸರು- ಉದ್ಯಮ ಸಂಸ್ಕೃತಿ ಮತ್ತು ಅಧ್ಯಾತ್ಮ.

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮೈರಾನ್‌ ಸ್ಟೋಲ್ಸ್‌ ಕೂಡ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ರವಿಶಂಕರ್‌ ಸೇರಿದಂತೆ ಅನೇಕ ಪಂಡಿತರು ಅಧ್ಯಾತ್ಮ ವಿಚಾರಗಳ ಬೋಧಿಸುವರು. ಉದ್ಯಮಿಗಳ ವೈಯಕ್ತಿಕ ಬದುಕು ಹಾಗೂ ಉದ್ಯಮದ ಏಳಿಗೆಯ ಹಿನ್ನೆಲೆಯಲ್ಲಿ ಈ ಸಮ್ಮೇಳನ ನೈತಿಕ ಭದ್ರತೆಯನ್ನು ಒದಗಿಸಲಿದೆ. ಯೋಗ, ಧ್ಯಾನ, ಅಧ್ಯಾತ್ಮ ವಿಚಾರಗಳ ಮೂಲಕ ಉದ್ಯಮ ಸಂಸ್ಕೃತಿಯನ್ನು ರೂಪಿಸುವ ನಿಟ್ಟಿನಲ್ಲಿ ಉದ್ಯಮ ಸಂಸ್ಕೃತಿ ಮತ್ತು ಅಧ್ಯಾತ್ಮ ಸಮ್ಮೇಳನ ಮಹತ್ವದ ಪಾತ್ರ ವಹಿಸಲಿದೆ ಎಂದು ನಿಖಿಲ್‌ ಸೇನ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+