ಕಾಂಚೀ ಶಂಕರಾಚಾರ್ಯರ ಜಾಮೀನು ಅರ್ಜಿಯ ವಿಚಾರಣೆ ನ.17 ಕ್ಕೆ
ಕಾಂಚೀ ಶಂಕರಾಚಾರ್ಯರ ಜಾಮೀನು ಅರ್ಜಿಯ ವಿಚಾರಣೆ ನ.17 ಕ್ಕೆ
ತಮಿಳುನಾಡಿನಲ್ಲಿ ವಿಶ್ವ ಹಿಂದೂ ಪರಿಷತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದ್ದು, ವೆಲ್ಲೂರು ಜೈಲಿನಲ್ಲಿಡಲಾಗಿದೆ. ಅವರ ಬಿಡುಗಡೆಗೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಾಲಸುಬ್ರಮಣ್ಯಂ ಮುಂದೂಡಿದ್ದಾರೆ.
ಕಾಂಚೀ ಶ್ರೀಗಳ ಬಂಧನ ವಿರೋಧಿಸಿ ವಿಶ್ವ ಹಿಂದೂ ಪರಿಷತ್ತು , ತಮಿಳು ನಾಡಿನಲ್ಲಿ ಶನಿವಾರ ಕರೆ ನೀಡಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಜೀವನದ ಮೇಲೆ ಬಂದ್ ಪರಿಣಾಮ ಬೀರಿಲ್ಲ . ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬಸ್ ಹಾಗೂ ರೈಲುಗಳ ಸಂಚಾರ ಎಂದಿನಂತಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications