ಕಂಚಿಶ್ರೀ ಬಂಧನ : ಆರೆಸ್ಸೆಸ್ ಖಂಡನೆ, ಪ್ರತಿಭಟನೆಗೆ ವಿಎಚ್‌ಪಿ ಸಜ್ಜು
ಕಂಚಿಶ್ರೀ ಬಂಧನ : ಆರೆಸ್ಸೆಸ್ ಖಂಡನೆ, ಪ್ರತಿಭಟನೆಗೆ ವಿಎಚ್‌ಪಿ ಸಜ್ಜು
ಸ್ವಾಮೀಜಿ ಬಂಧನ ಸಮಸ್ತೆ ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನ -ತೊಗಾಡಿಯಾ
ನಾವು ಬಂಧನವನ್ನು ಖಂಡಿಸುತ್ತೇವೆ. ಬಂಧನದ ಅವಶ್ಯಕತೆಯೇ ಇರಲಿಲ್ಲ . ಕಂಚಿಶ್ರೀಗಳು ತನಿಕೆಗೆ ಸಂಪೂರ್ಣ ಸಹಕಾರ ನೀಡಿದ್ದರು. ಅತ್ಯುನ್ನತ ಗೌರವದ ಹಿಂದೂ ಮಠವೊಂದರ ಹಿರಿಯ ಸ್ವಾಮೀಜಿಯ ಬಂಧನ ಲಕ್ಷಾಂತರ ಭಕ್ತರ ಭಾವನೆಗಳನ್ನು ನೋಯಿಸಿದೆ. ಉತ್ತಮವಾಗಿ ನಡೆಸಿಕೊಳ್ಳಲು ಕಂಚಿಶ್ರೀಗಳು ಅರ್ಹರು ಎಂದು ಆರೆಸ್ಸೆಸ್ ಲಕ್ತಾರ ರಾಮ್ ಮಾಧವ್ ತಿಳಿಸಿದ್ದಾರೆ.
ನೂರಾರು ವರ್ಷಗಳ ಇತಿಹಾಸವಿರುವ ಕಂಚಿಮಠದೊಂದಿಗೆ ಸಂಕಷ್ಟದ ಸಂದರ್ಭದಲ್ಲಿ ಒಗ್ಗಟ್ಟಾಗಿ ನಿಲ್ಲುವಂತೆ ಹಿಂದೂ ಸಮುದಾಯಕ್ಕೆ ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಮನವಿ ಮಾಡಿಕೊಂಡಿದ್ದಾರೆ.
ಹಿಂದೂಗಳಿಗೆ ಅವಮಾನ -ತೊಗಾಡಿಯಾ
ಕಂಚಿಶ್ರೀಗಳ ಬಂಧನಕ್ಕೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸರ್ಕಾರಗಳೊಂದಿಗೆ ಕೇಂದ್ರಸರ್ಕಾರವೂ ಪಿತೂರಿ ನಡೆಸಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ಕಂಚಿಶ್ರೀಗಳ ಬಂಧನ ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಈ ಅವಮಾನದ ವಿರುದ್ಧ ನ.13ರ ಶನಿವಾರದಿಂದ ಎರಡು ದಿನಗಳ ಪ್ರತಿಭಟನೆಯನ್ನು ದೇಶವ್ಯಾಪಿ ಹಮ್ಮಿಕೊಳ್ಳಲಾಗುವುದು ಎಂದು ವಿಎಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ. ಅನೇಕ ಕೇಸುಗಳು ಬಾಕಿಯಿರುವ ಜಾಮಾ ಮಸೀದಿಯ ಇಮಾಮ್ ಬುಖಾರಿಯನ್ನು ಬಂಧಿಸಲು ಅವರಿಗೆ ಸಾಧ್ಯವೆ ಎಂದು ತೊಗಾಡಿಯಾ ಪ್ರಶ್ನಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications