ಚಳವಳಿ ಹಾಗೂ ಸಾಫ್ಟ್‌ವೇರ್ : ಅಂತರ್ಜಾಲದಿ ಕರ್ನಾಟಕ ರಕ್ಷಣಾ ವೇದಿಕೆ
ಚಳವಳಿ ಹಾಗೂ ಸಾಫ್ಟ್‌ವೇರ್ : ಅಂತರ್ಜಾಲದಿ ಕರ್ನಾಟಕ ರಕ್ಷಣಾ ವೇದಿಕೆ
ಯಾರಿಗೆ ಕನ್ನಡ ಬೇಡವೋ ಅವರು ಕನ್ನಡಿಗರಿಗೆ ಬೇಡ-ಚಂಪಾ
- ವರದಿ : ಪ್ರವೀಣ್ ಬಿ.ಎಸ್.
ಇತ್ತೀಚೆಗೆ ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ನಡೆದ (ನ. 7) ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣದ ಉದ್ಘಾಟನಾ ಸಮಾರಂಭದಲ್ಲಿ ಚಂಪಾ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡದ ಹಿರಿಯ ಸಾಹಿತಿ ಎಲ್. ಎಸ್. ಶೇಷಗಿರಿರಾವ್ ಮಾತನಾಡುತ್ತ, ಕನ್ನಡಿಗರು ಸ್ವಾಭಿಮಾನಿಗಳಾಗಿ ನಾಡು-ನುಡಿ ಉಳಿಸಲು ಹೋರಾಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಾಧನೆ ಮಹತ್ವವನ್ನು ಪಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಸ್ಟರ್ ಹಿರಣ್ಣಯ್ಯ, ಹಿಂದೆ ನಾವು ಕಲ್ಲು ಹೊಡೆಯುವ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಒಳ್ಳೆಯ ಮಾತಿಗೆ ಬಗ್ಗದ ಪರಭಾಷಾ ದುರಭಿಮಾನಿಗಳಿಗೆ ದಂಡನೆಯೇ ಸರಿಯಾದ ಮಾರ್ಗ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಗಾಂಧಿವಾದಿ ಜಿ. ನಾರಾಯಣ, ಕನ್ನಡದ ಕೆಲಸ ಮಾಡಲು ನಮ್ಮ ರಾಜಕೀಯ ನಾಯಕರು ಅಸಮರ್ಥರಾಗಿದ್ದಾರೆ. ಪರಭಾಷಿಕರ ವಲಸೆಯೇ ಕನ್ನಡಿಗರ ಸಮಸ್ಯೆಗೆ ಮೂಲ. ಈ ಅನಾರೋಗ್ಯಕರ ವಲಸೆಯನ್ನು ತಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಶಾಸನ ರೂಪಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ಕನ್ನಡಿಗರಿಗೆ ಕನ್ನಡದಲ್ಲಿ ಕಲಿತರೆ ಒಳ್ಳೆಯ ಉದ್ಯೋಗ ದೊರೆಯುವಂತಾಗಲು, ಸರೋಜಿನಿ ಮಹಿಷಿ ವರದಿ ಅತ್ಯಗತ್ಯ. ಅದರ ಜಾರಿಗೆ ಹೋರಾಟವನ್ನು ಮಾಡಲು ವೇದಿಕೆಗೆ ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷರಾದ ಟಿ.ಎ. ನಾರಾಯಣ ಗೌಡ ಗಣಕ ಯಂತ್ರದ ಮೌಸ್ ಒತ್ತುವ ಮೂಲಕ ಕನ್ನಡ ಪರ ಹೋರಾಟಗಾರರ ಪ್ರಪ್ರಥಮ ಅಂತರ್ಜಾಲ ತಾಣವನ್ನು ಕನ್ನಡ ಕುಲಕೋಟಿಗೆ ಸಮರ್ಪಿಸಿ ಮಾತನಾಡುತ್ತ - ಕನ್ನಡದ ಹೋರಾಟಕ್ಕೆ ಮೊದಲ ಬಾರಿಗೆ ಸಾಫ್ಟ್‌ವೇರ್ ಉದ್ಯಮದಲ್ಲಿರುವ ಕನ್ನಡಿಗರ ಬೆಂಬಲ ಸಿಕ್ಕಿದೆ. ಇದರಿಂದ ಕನ್ನಡ ಚಳುವಳಿಗೆ ಹೊಸ ಆಯಾಮ ದೊರೆತಂತಾಗಿದೆ ಎಂದರು.
ಕನ್ನಡ ಚಿತ್ರರಂಗದ ಉಳಿವಿಗಾಗಿ ಹೋರಾಟ ಮಾಡಿ ಸೆರೆವಾಸ ಅನುಭವಿಸಿದ ನಮ್ಮ ಕಾರ್ಯಕರ್ತರ ಕ್ಷೇಮವನ್ನು ವಿಚಾರಿಸುವ ಸೌಜನ್ಯವನ್ನೂ ಚಿತ್ರರಂಗದ ಮಂದಿ ತೋರಿಸಲಿಲ್ಲ. ಅವರ ನಿಜವಾದ ಬಣ್ಣ ಈಗ ಬಯಲಾಗಿದೆ ಎಂದು ನಾರಾಯಣ ಗೌಡರು ವಿಷಾದ ವ್ಯಕ್ತಪಡಿಸಿದರು.
ಬನವಾಸಿ ಬಳಗದ ಮಹೇಶ್ ಪ್ರಾಸ್ತಾವಿಕ ಭಾಷಣದಲ್ಲಿ - ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣದ ಪ್ರಸ್ತುತತೆಯನ್ನು ಹಾಗೂ ಅವಶ್ಯಕತೆಯನ್ನು ವಿವರಿಸಿದರು. ಅಂತರ್ಜಾಲ ತಾಣವನ್ನು ಅಭಿವೃದ್ಧಿಗೊಳಿಸಿದ ಬನವಾಸಿ ಬಳಗದ ಗುರುಪ್ರಸಾದ್ ಅಂತರ್ಜಾಲ ತಾಣವನ್ನು ಪರಿಚಯಿಸಿದರು. ವೇದಿಕೆಯ ಪ್ರಮುಖ ಸಾಧನೆಗಳನ್ನು ಹಾಗೂ ಹೋರಾಟಗಳನ್ನು ಬನವಾಸಿ ಬಳಗದ ಪ್ರವೀಣ್ ವಿವರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಿನುತ ಮತ್ತು ವಿಭಾ ಪ್ರಾರ್ಥಿಸಿ, ಕನ್ನಡ ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬನವಾಸಿ ಬಳಗದ ರಾಘವೇಂದ್ರ ಸ್ವಾಗತಿಸಿ, ಜನಾರ್ಧನ ನಿರೂಪಿಸಿದರು. ಶಾಂತರಾಮ್ ವಂದಿಸಿದರು.
ವೇದಿಕೆಯ ಜಾಲತಾಣ : www.karnatakarakshanavedike.org.
ಮುಖಪುಟ / ವಾಟ್ಸ್ ಹಾಟ್
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications