ಢಂ ಢಂ! ಫೈರ್‌ಬ್ರಾಂಡ್ ನಾಯಕಿ ಉಮಾಭಾರತಿ ಪಕ್ಷದಿಂದ ಸಸ್ಪೆಂಡ್
ಢಂ ಢಂ! ಫೈರ್‌ಬ್ರಾಂಡ್ ನಾಯಕಿ ಉಮಾಭಾರತಿ ಪಕ್ಷದಿಂದ ಸಸ್ಪೆಂಡ್
ಬಿಜೆಪಿ ಅಧ್ಯಕ್ಷ ಎಲ್.ಕೆ.ಆಡ್ವಾಣಿ ತಂಡದ ಮೊದಲ ವಿಕೆಟ್ ಬಿತ್ತು !
ನ.10ರ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಉಮಾಭಾರತಿಯವರನ್ನು ಪಕ್ಷದಿಂದ ಅಮಾನತುಗೊಳಿಸಿರುವ ವಿಷಯ ತಿಳಿಸಿದರು. ಪಕ್ಷದ ನಾಯಕರ ಸಭೆಯಿಂದ ಉಮಾಭಾರತಿ ಹೊರಬಿದ್ದ ಸ್ವಲ್ಪ ಸಮಯದಲ್ಲೇ ಜಸ್ವಂತ್ ಈ ಪ್ರಕಟಣೆ ನೀಡಿದರು. ಸಭೆಯಿಂದ ಹೊರಬಿದ್ದ ಉಮಾ ಬಿಜೆಪಿ ನಾಯಕರ ವಿರುದ್ಧ ಮಾಧ್ಯಮ ಪ್ರತಿನಿಧಿಗಳ ಬಳಿ ದೂರಿದರು ಎನ್ನಲಾಗಿದೆ.
ಪಕ್ಷದ ವಿವಿಧ ಮುಖಂಡರು ಉಮಾ ಅಶಿಸ್ತಿನ ಬಗೆಗೆ ದೂರಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷರು ಉಮಾ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಅಮಾನತುಗೊಳಿಸಿದ್ದಾರೆ ಎಂದು ಜಸ್ವಂತ್ ಸಿಂಗ್ ತಿಳಿಸಿದರು.
(ಪಿಟಿಐ)
Post your views
ಮುಖಪುಟ / ವಾರ್ತೆಗಳು












Click it and Unblock the Notifications