ರಿಚ್‌ಮಂಡ್, ರೆಸಿಡೆನ್ಸಿ ಸೇರಿದಂತೆ ನಗರದ ಆರು ರಸ್ತೆಗಳಿನ್ನು ಏಕಮುಖ
ರಿಚ್‌ಮಂಡ್, ರೆಸಿಡೆನ್ಸಿ ಸೇರಿದಂತೆ ನಗರದ ಆರು ರಸ್ತೆಗಳಿನ್ನು ಏಕಮುಖ
ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ ಡಿ.1 ರಿಂದ ನಾನಾ ಪ್ರಯೋಗಗಳು
ಬದಲಾದ ಮಾರ್ಗಗಳು: ರಿಚ್‌ಮಂಡ್ ರಸ್ತೆಯಲ್ಲಿ ಡಿಸೋಜ ಜಂಕ್ಷನ್‌ನಿಂದ ರಿಚ್‌ಮಂಡ್ ವೃತ್ತ ಸೇರುವ ವಾಹನ ಸಂಚಾರವನ್ನು ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ. ಅದಕ್ಕೆ ವಿರುದ್ಧ ದಿಕ್ಕಿನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಮಗರತ್ ರಸ್ತೆಯಲ್ಲಿ ಷಾಪರ್ಸ್ ಸ್ಟಾಪ್ ಕಡೆಯಿಂದ ಬ್ರಿಗೇಡ್ ರಸ್ತೆ ಕಡೆ ಸಂಚಾರವನ್ನು ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ. ಅದರ ವಿರುದ್ಧ ದಿಕ್ಕಿನ ಸಂಚಾರವನ್ನು ನಿಷೇಧಿಸಲಾಗಿದೆ.
ವುಡ್‌ಸ್ಟ್ರೀಟ್ ರಸ್ತೆಯಲ್ಲಿ ಬ್ರಿಗೇಡ್ ರಸ್ತೆ ಕಡೆಯಿಂದ ಮದರ್ ತೆರೇಸಾ ವೃತ್ತದ ಕಡೆಗೆ ಬರುವ ವಾಹನ ಸಂಚಾರದಲ್ಲಿ ಬದಲಾವಣೆ ಇಲ್ಲ. ಅದರ ವಿರುದ್ಧ ದಿಕ್ಕಿನ ಸಂಚಾರವನ್ನು ನಿಷೇಧಿಸಲಾಗಿದೆ. ಹೊಸೂರು ಮುಖ್ಯರಸ್ತೆ ಕಡೆಯಿಂದ ಮದರ್ ತೆರೇಸಾ ರಸ್ತೆ ಮೂಲಕ ಡಿಸೋಜ ವೃತ್ತ ಸೇರಲು ಅವಕಾಶ ಮಾಡಿಕೊಡಲಾಗಿದೆ. ಮ್ಯೂಸಿಯಂ ರಸ್ತೆಯಲ್ಲಿನ ಆಶೀರ್ವಾದಂ ವೃತ್ತದಿಂದ ಶೋಲೆ ಜಂಕ್ಷನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ವಾಹನಗಳ ಸಂಚಾರವನ್ನು ಯಥಾಸ್ಥಿತಿಯಲ್ಲಿಡಲಾಗಿದೆ. ಅದರ ವಿರುದ್ಧ ದಿಕ್ಕಿನ ಆಶೀರ್ವಾದಂ ವೃತ್ತದಿಂದ ಶೂಳೆ ಜಂಕ್ಷನ್‌ವರೆಗೆ ಸಂಚಾರ ನಿಷೇಧಿಸಲಾಗಿದೆ.
ರೆಸಿಡೆನ್ಸಿ ರಸ್ತೆ, ಕಮೀಸರಿಯೇಟ್ ರಸ್ತೆ, ಹಾಸ್ಮೆಟ್ ಜಂಕ್ಷನ್,ರಿಚಮಂಡ್ ರಸ್ತೆ, ಟ್ರಿನಿಟಿ ವೃತ್ತ, ಕೆನ್‌ಸಿಂಗ್‌ನ ರಸ್ತೆ ಮೂಲಕ ಸಂಚರಿಸಿ ಹೊಸಕೋಟೆ ಹಾಗೂ ಕೋಲಾರದ ದೂರದ ಊರುಗಳಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.
ಬಸ್ ನಿಲ್ದಾಣಗಳ ಸ್ಥಳಾಂತರ : ರೆಸಿಡೆನ್ಸಿ ರಸ್ತೆಯಲ್ಲಿನ ಮೆಯಾಹಾಲ್ ಬಳಿಯ ಬಸ್ ನಿಲ್ದಾಣವನ್ನು ಕಮಿಸೇರಿಯೇಟ್ ರಸ್ತೆಗೆ ಸ್ಥಳಾಂತರಿಸಲಾಗಿದೆ. ಸೇಂಟ್ ಜೋಸೆಫ್ ಕಾಲೇಜ್ ಮುಂದಿರುವ ಬಸ್ ನಿಲ್ದಾಣವನ್ನು ರಿಚ್‌ಮಂಡ್ ರಸ್ತೆಯ ವೆಲ್ಲಾರ ಜಂಕ್ಷನ್ ಬಳಿ ಸ್ಥಳಾಂತರಿಸಲಾಗಿದೆ. ಬಿಷಪ್‌ಕಾಟನ್ ಹೈಸ್ಕೂಲು ಮುಂಭಾಗದ ಬಸ್ ನಿಲ್ದಾಣವನ್ನು ರಿಚ್‌ಮಂಡ್ ಬಾಲಕಿಯರ ಶಾಲೆಯ ಬಳಿ ಸ್ಥಳಾಂತರಿಸಲಾಗಿದೆ.
ರಿಚ್‌ಮಂಡ್ ರಸ್ತೆಯಿಂದ ಏರ್‌ಫೋರ್ಟ್ ಕಡೆಗೆ ಹೋಗುವ ವಾಹನಗಳು ರೆಸಿಡೆನ್ಸಿ ರಸ್ತೆಯಲ್ಲಿ ಬಲ ತಿರುವು ಪಡೆದು, ಕಮಿಸೇರಿಯೇಟ್ ರಸ್ತೆಯಲ್ಲಿ ಸಂಚರಿಸಿ ಎಡತಿರುವು ಪಡೆದು ಮಗರತ್ ರಸ್ತೆ-ಹಾಸ್‌ಮ್ಯಾಟ್ ಜಂಕ್ಷನ್-ಲೋಯರ್ ಅಗರಂ ರಸ್ತೆ- ಇಂಡಿಯಾ ಗ್ಯಾರೇಜ್ ಎಎಸ್‌ಸಿ ಸೆಂಟರ್ ಮೂಲಕ ಸಂಚರಿಸಿ ಏರ್‌ಫೋರ್ಟ್ ರಸ್ತೆಗೆ ಸೇರುವ ಅವಕಾಶವನ್ನು ಕಲ್ಪಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications