ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಡೆಲ್ಲಿಯಲ್ಲಿ ಕಸರತ್ತು-ಕಣದಲ್ಲಿ ಬಂಗಾರಪ್ಪ

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಡೆಲ್ಲಿಯಲ್ಲಿ ಕಸರತ್ತು-ಕಣದಲ್ಲಿ ಬಂಗಾರಪ್ಪ
ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ಬಲಾಬಲ ಪರೀಕ್ಷೆ: ವರಿಷ್ಠರಿಗೆ ತಲೆ ಬಿಸಿ

ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ ಬಿಟ್ಟು ಬಿಜೆಪಿ ಪ್ರವೇಶಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಎಸ್‌.ಬಂಗಾರಪ್ಪ, ಅಧ್ಯಕ್ಷ ಪದವಿಯ ಕ್ಯೂನಲ್ಲಿ ನಿಂತಿದ್ದಾರೆ. ಹೀಗಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದೆ.

ಅನಂತ್‌ ಕುಮಾರ್‌ ರಾಷ್ಟ್ರ ರಾಜಕಾರಣಕ್ಕೆ ಮರಳಿದ ನಂತರ ತೆರವಾಗಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ದೆಹಲಿಯಲ್ಲಿ ಲಾಬಿ ಆರಂಭವಾಗಿದೆ. ಪಕ್ಷದಲ್ಲಿನ ವಿವಿಧ ಗುಂಪುಗಳು ವರಿಷ್ಠರ ಮೇಲೆ ಭಾರೀ ಒತ್ತಡ ಹೇರುತ್ತಿವೆ. ಮಂಗಳೂರು ಸಂಸದ ಡಿ.ವಿ.ಸದಾನಂದ ಗೌಡ, ಶಾಸಕ ಜಗದೀಶ್‌ಶೆಟ್ಟರ್‌ ಮೊದಲಿಂದಲೂ ಆಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳೆಂದು ಗುರ್ತಿಸಿಕೊಂಡಿದ್ದಾರೆ.

ಲಿಂಗಾಯಿತ ಸಮುದಾಯದ ಬೆಂಬಲ ಹಾಗೂ ಅನುಭವಿ ಎಂಬ ಹೆಗ್ಗಳಿಕೆ ಜಗದೀಶ್‌ಶೆಟ್ಟರ್‌ಗಿದೆ. ಆರ್‌ಎಸ್‌ಎಸ್‌ ಹಿನ್ನೆಲೆಯ ಸದಾನಂದ ಗೌಡರಿಂದ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಬಂಧ ಬಲವಾಗುತ್ತದೆ. ಗೌಡರಿಗೆ ಅವಕಾಶ ಕಲ್ಪಿಸಿದರೆ ಒಕ್ಕಲಿಗರ ಸೆಳೆಯಲು ಸುಲಭವಾಗುತ್ತದೆ ಎನ್ನುವುದು ಅವರ ಬೆಂಬಲಿಗರ ವಾದ. ಆದರೆ ಕಾಂಗ್ರೆಸ್‌ನ ಎಸ್‌.ಎಂ.ಕೃಷ್ಣ , ಜೆಡಿಎಸ್‌ನ ದೇವೇಗೌಡರ ಮುಂದೆ ಸದಾನಂದ ಗೌಡ ನಿಲ್ಲಲು ಹೇಗೆ ಸಾಧ್ಯ ಎನ್ನುವುದು ಅವರ ವಿರೋಧಿಗಳ ಪ್ರಶ್ನೆ.

ಬಂಗಾರಪ್ಪ ಸರಿ: ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಯಾವಾಗ ಬೇಕಾದರೂ ಉರುಳ ಬಹುದು. ಇಂತಹ ಸಮಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ರಚಿಸಿ, ಮತ್ತೊಂದು ಚುನಾವಣೆ ತಪ್ಪಿಸಲು ಬಂಗಾರಪ್ಪ ಮಾತ್ರ ಸಮರ್ಥರು. ಹಿಂದುಳಿದ ವರ್ಗದ ಮುಖಂಡ ಬಂಗಾರಪ್ಪ ಬಿಜೆಪಿಗೆ ಚೈತನ್ಯ ತುಂಬಬಲ್ಲರು. ರಾಜ್ಯದಲ್ಲಿ ಬಿಜೆಪಿ ಸಾರಥ್ಯವಹಿಸಲು ಬಂಗಾರಪ್ಪ ಸಮರ್ಥರೆಂದು ಬಿಜೆಪಿ ವರಿಷ್ಠರ ಮನವೊಲಿಸುವ ಪ್ರಯತ್ನಗಳು ನಡೆದಿವೆ. ಎಲ್‌.ಕೆ. ಆಡ್ವಾಣಿ ಹಾಗೂ ಅನಂತಕುಮಾರ್‌ ಸಹಾ ಬಂಗಾರಪ್ಪ ನವರ ಬಗೆಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+