ಸುನಂದಾ ಪ್ರಕಾಶ ಕಡಮೆಗೆ ಛಂದ ಪುಸ್ತಕ ಬಹುಮಾನ
ಸುನಂದಾ ಪ್ರಕಾಶ ಕಡಮೆಗೆ ಛಂದ ಪುಸ್ತಕ ಬಹುಮಾನ
2005ರ ಜನವರಿ ತಿಂಗಳಲ್ಲಿ ಬಹುಮಾನ ವಿತರಣೆ- ಪುಸ್ತಕ ಪ್ರಕಟಣೆ
ಈ ಬಾರಿಯ ಛಂದ ಪುಸ್ತಕ ಬಹುಮಾನವನ್ನು ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ ಪಡೆದುಕೊಂಡಿದ್ದಾರೆ. 2005ರ ಜನವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಕಥಾಸಂಕಲನದ ಪ್ರಕಟಣೆ, ಸಾವಿರ ರೂಪಾಯಿ ಗೌರವಧನ ಮತ್ತು ಪ್ರಶಸ್ತಿಪತ್ರವನ್ನು ನೀಡಲಾಗುತ್ತದೆ.
ಸ್ಪರ್ಧೆಗೆ ಮೂವತ್ತೈದು ಹಸ್ತಪ್ರತಿಗಳು ಬಂದಿದ್ದವು. ಪ್ರತಿವರ್ಷವೂ ಯುವ ಕತೆಗಾರರೊಬ್ಬರ ಪ್ರಥಮ ಕಥಾಸಂಕಲನವನ್ನು ಪ್ರಕಟಿಸುವುದು ಛಂದಪುಸ್ತಕದ ಉದ್ದೇಶವಾಗಿದೆ ಎಂದು ಛಂದಪುಸ್ತಕದ ಪರವಾಗಿ ವಸುಧೇಂದ್ರ ತಿಳಿಸಿದ್ದಾರೆ.
ವಿಜಯ ಕರ್ನಾಟಕ ಕಥಾಸ್ಪರ್ಧೆ-2003 ರಲ್ಲಿ ಮಗು ಚಿತ್ರ ಬರೆಯಿತು ಕಥೆಗೆ ದ್ವಿತೀಯ ಬಹುಮಾನ, ಸಂಚಯ ಸಾಹಿತ್ಯ ಸ್ಪರ್ಧೆ(2003) ಯಲ್ಲಿ ಬಹುಮಾನ ಪಡೆದಿರುವ ಸುನಂದಾ ಪ್ರಕಾಶ ಕಡಮೆ ಈಚಿನ ದಿನಗಳಲ್ಲಿ ಗಮನ ಸೆಳೆಯುತ್ತಿರುವ ಬರಹಗಾರರಲ್ಲೊಬ್ಬರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications