ಮುಳುಗುತ್ತಿದ್ದ ಹಡಗು ದಡಸೇರಿತು; ‘ಮೈಸೂರುಸಿಲ್ಕ್‌’ ಕೋರೈಸುತ್ತಿದೆ!

ಮುಳುಗುತ್ತಿದ್ದ ಹಡಗು ದಡಸೇರಿತು; ‘ಮೈಸೂರುಸಿಲ್ಕ್‌’ ಕೋರೈಸುತ್ತಿದೆ!
ವರ್ಷದ ಹಿಂದೆ ಸಂಕಷ್ಟದಲ್ಲಿದ್ದ ಕೆಎಸ್‌ಐಸಿ ಮೋರೆಯಲ್ಲೀಗ ದೀಪಾವಳಿ ಬೆಳಕು

ಮೈಸೂರು : ಸರಕಾರಿ ಉದ್ಯಮಗಳೆಂದರೆ, ಲಾಭಕ್ಕಿಂತಲೂ ನಷ್ಟವೇ ಹೆಚ್ಚು ಎನ್ನುವುದು ಸಾರ್ವತ್ರಿಕ ಅನಿಸಿಕೆ. ಅಂತಹ ನಿದರ್ಶನಗಳೇ ನಮ್ಮ ಮುಂದಿದೆ. ಆದರೆ ಇದು ನಷ್ಟ ತುಂಬಿಸಿಕೊಂಡ ಯಶಸ್ಸಿನ ಕಥೆ. ವರ್ಷದ ಹಿಂದೆ ಮುಳುಗುವ ಹಡಗು ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ರೇಷ್ಮೆ ಉದ್ಯಮ ನಿಗಮ(ಕೆಎಸ್‌ಐಸಿ) ಇದೀಗ ಸಂಕಷ್ಟದಿಂದ ಚೇತರಿಸಿಕೊಂಡಿದೆ. ಬದಿಗೆ ಸರಿಯಬೇಕಾಗಿದ್ದ, ಮೈಸೂರು ಸಿಲ್ಕ್‌ ಮತ್ತೆ ಹೊಸ ಚೈತನ್ಯದೊಂದಿಗೆ ಮಾರುಕಟ್ಟೆಯಲ್ಲಿ ತನ್ನ ವೈಶಿಷ್ಟ್ಯತೆ ಉಳಿಸಿಕೊಂಡು ಮಿಂಚುತ್ತಿದೆ.

ವರ್ಷದ ಹಿಂದೆ ತೀವ್ರ ನಷ್ಟದಲ್ಲಿದ್ದ ಮೈಸೂರು ಸಿಲ್ಕ್‌ಗೆ ಬಾಗಿಲಿಗೆ ಬೀಗ ಹುಡುಕುವ ಪರಿಸ್ಥಿತಿ ಬಂದಿತ್ತು. ಅಧಿಕ ಕಾರ್ಮಿಕರು- ನೌಕರರು, ನಿಗಮದಲ್ಲಿನ ಅವ್ಯವಹಾರ, ಭ್ರಷ್ಟಾಚಾರ, ನೌಕರರ ಅಸಡ್ಡೆ, ಜನರ ಅಭಿರುಚಿಗೆ ಸ್ಪಂದಿಸದೇ ಹಳೇ ವಿನ್ಯಾಸಗಳಿಗೆ ನೇತುಬಿದ್ದದ್ದು, ಇವೆಲ್ಲಾ ನಿಗಮದ ಅವಸಾನದ ಹಾದಿಗೆ ಕಾರಣವಾಗಿತ್ತು. ಸುಮಾರು 21.91 ಕೋಟಿ ಸಾಲದ ಹೊರೆ ನಿಗಮದ ಮೇಲಿತ್ತು.

ಸರಕಾರ ಕೆಎಸ್‌ಐಸಿಗೆ ಪುನರುಜ್ಜೀವನ ನೀಡಲು ಮುಂದಾಯಿತು. ಚನ್ನಪಟ್ಟಣ ಮತ್ತು ಕನಕಪುರ ಘಟಕಗಳ ಮುಚ್ಚಲಾಯಿತು. ಸುಮಾರು 850 ನೌಕರರಿಗೆ ಸ್ವಯಂ ನಿವೃತ್ತಿ ನೀಡಲಾಯಿತು. ಸರಕಾರದ ಬಲ, ಕಾರ್ಮಿಕರು ಹಾಗೂ ನೌಕರರ ಸತತ ಶ್ರಮದ ಪರಿಣಾಮ ನಿಗಮಕ್ಕೆ ಹಿಡಿದಿದ್ದ ಗ್ರಹಣ ಬದಿಗೆ ಸರಿಯಿತು. 2004 ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 25 ಸಾವಿರ ಸೀರೆಗಳನ್ನು ಉತ್ಪಾದಿಸಲಾಗಿದ್ದು, ಸುಮಾರು 10.5 ಕೋಟಿ ರೂ. ವಹಿವಾಟು ನಡೆದಿದೆ. ಹಂತ ಹಂತವಾಗಿ ಸಾಲದ ಪ್ರಮಾಣ ತಗ್ಗುತ್ತಿದೆ. ಭರವಸೆ ಚಿಗುರುತ್ತಿದೆ.

ಖಾಸಗಿಯವರಿಗೆ ಪೈಪೋಟಿ ನೀಡಲು ಹೊಸ ಬೆಡಗಿನೊಂದಿಗೆ ಮೈಸೂರು ಸಿಲ್ಕ್‌ ಮಾರುಕಟ್ಟೆ ಪ್ರವೇಶಿಸಿದೆ. ಕ್ರೇಪ್‌, ಟ್ವಿಸ್ಟೆಡ್‌, ಸ್ಮಾಲ್‌ ಚೆಕ್ಸ್‌, ರಿಚ್‌ ಪಲ್ಲು ಸೇರಿದಂತೆ ಹೊಸ ಬಣ್ಣ, ಹೊಸ ವಿನ್ಯಾಸದೊಂದಿಗೆ ವನಿತೆಯರ ಮನಸ್ಸನ್ನು ಮೈಸೂರು ಸಿಲ್ಕ್‌ ಮತ್ತೆ ಆಕರ್ಷಿಸುತ್ತಿದೆ.

ಅಂದ ಹಾಗೆ, ಇನ್ನು ಮುಂದೆ ಮೈಸೂರು ಸಿಲ್ಕ್‌ ಸೀರೆಗಳು ಡೀಲರ್‌ಗಳ ಬಳಿ ದೊರೆಯುವುದಿಲ್ಲ. ನಕಲಿಗಳ ಹಾವಳಿಯನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಈಗ, ಮೈಸೂರು ಸಿಲ್ಕ್‌ ಉತ್ಪನ್ನ ಅಧಿಕೃತ ಷೋರೂಂಗಳಲ್ಲಿ ಮಾತ್ರ ಲಭ್ಯ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+