ಧರ್ಮ ಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಾಟಿಕಾ ಕನ್ನಡಿಗ-2004
ಧರ್ಮ ಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಾಟಿಕಾ ಕನ್ನಡಿಗ-2004
ನವಂಬರ್ 20ರಂದು ಹಾಸನದಲ್ಲಿ ಪ್ರಶಸ್ತಿ ಪ್ರದಾನ
ಜನಾಭಿಪ್ರಾಯವೇ ಮಾನದಂಡವಾಗಿರುವ ಈ ಪ್ರಶಸ್ತಿಗಾಗಿ, ರಾಜ್ಯದ 45 ಮತ ಗಟ್ಟೆ ಕೇಂದ್ರ ಹಾಗೂ ಪ್ರಮುಖ ನಗರಗಳಲ್ಲಿ ಸಂಚಾರಿ ಅಭಿಮತ ಕೇಂದ್ರಗಳ ಮೂಲಕ ಕನ್ನಡಿಗರ ಆಯ್ಕೆಯನ್ನು ಸಂಗ್ರಹಿಸಲಾಗಿತ್ತು. ಅಂತಿಮ ಸುತ್ತಿನಲ್ಲಿ 20 ಸಾವಿರಕ್ಕೂ ಅಧಿಕ ಮಂದಿಯ ಮೆಚ್ಚುಗೆಗೆ ಪಾತ್ರರಾಗಿದ್ದ, ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇನ್‌ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ, ಸುಧಾ ಮೂರ್ತಿ, ಚಲನಚಿತ್ರ ನಟ ವಿಷ್ಣುವರ್ಧನ್, ಕ್ರಿಕೆಟ್ ಪಟು ರಾಹುಲ್ ದ್ರಾವಿಡ್, ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂರ್ತಿ, ಲೋಕಾಯುಕ್ತ ವೆಂಕಟಾಚಲ ಸೇರಿದಂತೆ ಹದಿನೈದು ಮಂದಿ ಮೊದಲ ಸುತ್ತಿನಲ್ಲಿ ಆಯ್ಕೆಯಾಗಿದ್ದರು.
ವಾಟಿಕಾ ವರ್ಷದ ಕನ್ನಡಿಗ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನ.20 ರಂದು ಹಾಸನದಲ್ಲಿ ನಡೆಯುತ್ತಿದೆ. ಕಳೆದ ವರ್ಷ ಈ ಪ್ರಶಸ್ತಿಗೆ ಡಾ.ರಾಜ್‌ಕುಮಾರ್ ಪಾತ್ರರಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications