ಚುನಾವಣೆ ನಂತರ ಮೌನವಾಗಿದ್ದ ಟಿಪ್ಪು ಖಡ್ಗ ಮತ್ತೆ ಸುದ್ದಿಯಲ್ಲಿದೆ !

ಚುನಾವಣೆ ನಂತರ ಮೌನವಾಗಿದ್ದ ಟಿಪ್ಪು ಖಡ್ಗ ಮತ್ತೆ ಸುದ್ದಿಯಲ್ಲಿದೆ !
ವಿಜಯ ಮಲ್ಯ ನಾಡಿಗೆ ಮರಳಿ ತಂದ ಟಿಪ್ಪುಖಡ್ಗಕ್ಕೆ ಸೀಮಾ ಸುಂಕದ ಬಿಸಿ

ಬೆಂಗಳೂರು : ಎಲ್ಲರೂ ದೇಶ ಪ್ರೇಮದ ಬಗೆಗೆ ಮಾತನಾಡುತ್ತಾರೆ. ಕೆಲವರು ಮಾತ್ರ ಕ್ರಿಯೆಯಲ್ಲಿ ಪ್ರದರ್ಶಿಸುತ್ತಾರೆ. ರಾಷ್ಟ್ರದ ಸ್ವಾಭಿಮಾನವನ್ನು ವಿಜಯಮಲ್ಯ ಮರಳಿ ತಂದಿದ್ದಾರೆ- ಇದು ಜನತಾಪಕ್ಷ ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಬಳಸಿದ್ದ ಘೋಷಣೆ. ಅಂದು ಸುದ್ಧಿಯ ಕೇಂದ್ರ ಬಿಂದುವಾಗಿದ್ದ ಟಿಪ್ಪು ಸುಲ್ತಾನ್‌ ಖಡ್ಗಕ್ಕೆ ಈಗ ಸೀಮಾ ಸುಂಕದ ಬಿಸಿ ತಟ್ಟಿದೆ. ಖಡ್ಗ ಮತ್ತೆ ಸುದ್ದಿಯಲ್ಲಿದೆ.

ದೇಶೀಯ ಮತ್ತು ವಿದೇಶೀಯ ಮೂಲದ ಯಾವುದೇ ವಸ್ತುವಿರಲಿ, ಆಮದು ಮಾಡಿಕೊಂಡ ಪ್ರತಿ ಸರಕಿಗೂ ಸೀಮಾ ಸುಂಕ ಅನ್ವಯಿಸುತ್ತದೆ. ಆಮದು ಪರವಾನಗಿಯ ವಿಧಿವಿಧಾನಗಳನ್ನು ಮಲ್ಯ ಪೂರೈಸಿಲ್ಲ. ಖಡ್ಗದ ಮೌಲ್ಯ ಸೂಚಿಸಿರುವ ಕಸ್ಟಮ್ಸ್‌ ಇಲಾಖೆ, ಮಲ್ಯ ಪ್ರತಿಕ್ರಿಯೆಯನ್ನು ಕಾಯುತ್ತಿದೆ.

ಭಾರತ ಸರಕಾರ ವಿನಾಯಿತಿ ಪ್ರಕಟಿಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಮಲ್ಯ ಸುಂಕ ವಿನಾಯಿತಿಗೆ ಮನವಿ ಸಲ್ಲಿಸಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

1799 ರಲ್ಲಿ ನಡೆದ ಶ್ರೀರಂಗ ಪಟ್ಟಣದ ಕಾಳಗದಲ್ಲಿ ಟಿಪ್ಪು ಸುಲ್ತಾನ್‌ ಸಾವನ್ನಪ್ಪಿದ ನಂತರ, ಈ ಖಡ್ಗ ಬ್ರಿಟನ್‌ ತಲುಪಿತ್ತು. ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಗೆದ್ದು , ಡಾ. ವಿಜಯಮಲ್ಯ ಐತಿಹಾಸಿಕ ಖಡ್ಗವನ್ನು ನಾಡಿಗೆ ಮರಳಿ ತಂದಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+