ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಫೈರ್‌ಬ್ರಾಂಡ್ ಉಮಾ ಆಯ್ಕೆ
ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಫೈರ್‌ಬ್ರಾಂಡ್ ಉಮಾ ಆಯ್ಕೆ
ಆಡ್ವಾಣಿ ಸಾರಥ್ಯದ ಬಿಜೆಪಿ ಚೈತನ್ಯ ರಥಕ್ಕೆ ಹೊಸ ಸೇರ್ಪಡೆ
ಬಿಜೆಪಿ ಮುಖಂಡ ಅರುಣ್‌ಜೇಟ್ಲಿ ಈ ವಿಚಾರವನ್ನು ಗುರುವಾರ(ನ.4)ಸುದ್ದಿಗಾರಿಗೆ ತಿಳಿಸಿದರು. ಬಿಜೆಪಿಗೆ ಚೈತನ್ಯ ತುಂಬಲು ಪಕ್ಷದ ಅಧ್ಯಕ್ಷ ಎಲ್.ಕೆ. ಆಡ್ವಾಣಿ ಕಾರ್ಯತಂತ್ರ ರೂಪಿಸುತ್ತಿದ್ದು, ಪದಾಧಿಕಾರಿಗಳ ಬದಲಾವಣೆಗೆ ಮುಂದಾಗಿದ್ದಾರೆ.
ಬಿಜೆಪಿ ಉಗ್ರಹಿಂದುತ್ವ ಸಿದ್ಧಾಂತಕ್ಕೆ ಮರಳಿರುವ ಸೂಚನೆ ನೀಡಿರುವ ಬೆನ್ನಲ್ಲಿಯೇ ಉಮಾಭಾರತಿಯ ನೇಮಕಾತಿ ನಡೆದಿದೆ. ಅಯೋಧ್ಯೆ ಗದ್ದಲ ಮತ್ತು ಈದ್ಗಾ ಮೈದಾನದ ಪ್ರಕರಣಗಳಲ್ಲಿ ರಾಷ್ಟ್ರದಲ್ಲಿ ಉಮಾಭಾರತಿ ಸುದ್ದಿ ಮಾಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications