ಅಂಗವಿಕಲರಿಗೆ ಅವಕಾಶ ಕೊಡಿ ; ಕಾಲ್‌ಸೆಂಟರ್‌ಗಳಿಗೆ ರಾಷ್ಟ್ರಪತಿ ಕರೆ
ಅಂಗವಿಕಲರಿಗೆ ಅವಕಾಶ ಕೊಡಿ ; ಕಾಲ್‌ಸೆಂಟರ್‌ಗಳಿಗೆ ರಾಷ್ಟ್ರಪತಿ ಕರೆ
ಭಾರತೀಯ ಭಾಷೆಗಳಲ್ಲಿ ಬ್ರೆೃಲಿ ಸಾಫ್ಟ್‌ವೇರ್ ರೂಪಿಸಲು ಆಗ್ರಹ
ಕಡಿಮೆ ತಂತ್ರಜ್ಞಾನ ಬಳಕೆ ಹಾಗೂ ಅಲ್ಪಾವಧಿಯ ತರಬೇತಿ ನೀಡಿ ದೃಷ್ಟಿಮಾಂದ್ಯರನ್ನು ಕರೆಕೇಂದ್ರಗಳಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ಕಲಾಂ ಅಭಿಪ್ರಾಯಪಟ್ಟರು. ಬೆಂಗಳೂರಿನ ಸ್ಪಾಸ್ಟಿಕ್ಸ್ ಆಫ್ ಇಂಡಿಯಾದಲ್ಲಿ ಪಾಲಿಟೆಕ್ನಿಕ್ ಉದ್ಘಾಟಿಸಿ ಕಲಾಂ ನ.5ರ ಶುಕ್ರವಾರ ಮಾತನಾಡುತ್ತಿದ್ದರು.
ಬ್ರೆೃಲಿ ಸಾಫ್ಟ್‌ವೇರ್ ರೂಪಿಸುವಂತೆ ಐಟಿ ಸಮುದಾಯಕ್ಕೆ ಕರೆ ನೀಡಿದ ಕಲಾಂ- ಬ್ರೆೃಲಿ ಸೂಚನೆಗಳನ್ನು ಶ್ರವಣ ಹಾಗೂ ಪಠ್ಯವನ್ನಾಗಿ ಬದಲಿಸುವ ತಂತ್ರಜ್ಞಾನವನ್ನು ಭಾರತೀಯ ಭಾಷೆಗಳಲ್ಲಿ ರೂಪಿಸುವುದು ಅಗತ್ಯವಾಗಿದೆ. ಪ್ರಸ್ತುತ ಈ ತಂತ್ರಜ್ಞಾನ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ ಎಂದರು.
ದೈಹಿಕ ಹಾಗೂ ಮಾನಸಿಕ ನ್ಯೂನತೆ ಹೊಂದಿರುವವರ ಅಂಕಿಅಂಶ ಸರಿಯಾಗಿ ಲಭ್ಯವಿಲ್ಲ . ಪ್ರಸ್ತುತ ಸರ್ಕಾರಿ ಪುನರ್ವಸತಿ ಕಾರ್ಯಕ್ರಮಗಳಲ್ಲಿ ಸ್ಥಾನ ಪಡೆದಿರುವುದು ಕೇವಲ ಶೇ.20 ರಷ್ಟು ಮಂದಿ ಮಾತ್ರ. ಉಳಿದ ಬಹುಸಂಖ್ಯಾತ ಅಂಗನ್ಯೂನರಿಗೆ ಯಾವುದೇ ಸವಲತ್ತು ದೊರೆಯುತ್ತಿಲ್ಲ ಎಂದು ಕಲಾಂ ವಿಷಾದಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications