ಋಣ ಸಂದಾಯ : ಹಾಲುಂಡ ತವರು ಗುಲ್ಬರ್ಗಾಕ್ಕೆ 508 ಕೋಟಿ ರು.
ಋಣ ಸಂದಾಯ : ಹಾಲುಂಡ ತವರು ಗುಲ್ಬರ್ಗಾಕ್ಕೆ 508 ಕೋಟಿ ರು.
ವಿಮಾನ ನಿಲ್ದಾಣ ಕಾಮಗಾರಿಗೆ ಪ್ಯಾಕೇಜ್‌ನಲ್ಲಿ ಆದ್ಯತೆ
ಹಿಂದೆ ತಮ್ಮ ಅಧಿಕಾರವಧಿಯಲ್ಲಿ ಎಸ್.ಎಂ.ಕೃಷ್ಣ, ಗುಲ್ಪರ್ಗ ನಗರದಲ್ಲಿ ನೀರು, ಒಳಚರಂಡಿ, ರಸ್ತೆ ಮತ್ತಿತರ ಪ್ರಗತಿಪರ ಕಾಮಗಾರಿಗಳಿಗಾಗಿ 130 ಕೋಟಿ ರೂ.ಗಳ ಪ್ಯಾಕೇಜ್ ಮಂಜೂರು ಮಾಡಿದ್ದರು. ಅದು ಸೇರಿದರೆ ಸರಕಾರದಿಂದ, ಗುಲ್ಪರ್ಗ ಜಿಲ್ಲೆಯ ಅಲಂಕಾರಕ್ಕೆ 638 ಕೋಟಿ ರೂಪಾಯಿ ದಕ್ಕಿದಂತಾಗಿದೆ.
ರಸ್ತೆ, ನೀರು, ಕಟ್ಟಡದ ಜೊತೆಗೆ ಗುಲ್ಪರ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯೂ 508.22 ಕೋಟಿಯ ಪ್ಯಾಕೇಜ್‌ನಲ್ಲಿ ಸೇರ್ಪಡೆಗೊಂಡಿದೆ. ಎಸ್.ಎಂ. ಕೃಷ್ಣ ಸರಕಾರ ಘೋಷಿಸಿದ್ದ ಪ್ಯಾಕೇಜ್‌ನ ಪೂರ್ಣ ಹಣ ಬಿಡುಗಡೆ ಯಾಗಿಲ್ಲ ಎನ್ನುವ ದೂರುಗಳು ಈ ಭಾಗದಲ್ಲಿವೆ.
ಪ್ಯಾಕೇಜ್ ಅನುಷ್ಠಾನದ ಬಗೆಗೆ ಯಾವುದೇ ಅನುಮಾನಗಳು ಬೇಡ. ಹಂತಹಂತವಾಗಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಭರವಸೆ ನೀಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications