ಶ್ರೀಕೃಷ್ಣನೂರ ಹುಡುಗರಿಗೆ ‘ಐಟಿ ಕ್ವಿಜ್‌-2004’ ಪ್ರಶಸ್ತಿಯ ನವಿಲುಗರಿ

ಶ್ರೀಕೃಷ್ಣನೂರ ಹುಡುಗರಿಗೆ ‘ಐಟಿ ಕ್ವಿಜ್‌-2004’ ಪ್ರಶಸ್ತಿಯ ನವಿಲುಗರಿ
ಮಂಡ್ಯ ಹುಡುಗರು ದ್ವಿತೀಯ, ಬಿಜಾಪುರ ಶಾಲೆಗೆ ತೃತೀಯ ಸ್ಥಾನ

ಬೆಂಗಳೂರು : ಪ್ರತಿಷ್ಠಿತ ಬೆಂಗಳೂರು ಐಟಿ.ಕಾಂ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಲಿಟ್ಲ್‌ರಾಕ್‌ ಇಂಡಿಯನ್‌ ಶಾಲೆ ಪ್ರಥಮ ಬಹುಮಾನ ಗಳಿಸಿದೆ.

ನ.3ರ ಮಂಗಳವಾರ ಕೊನೆಗೊಂಡ ಐಟಿ ಕ್ವಿಜ್‌ನ ಫೈನಲ್ಸ್‌ನಲ್ಲಿ ಉಡುಪಿ-ಬ್ರಹ್ಮಾವರದ ಲಿಟ್ಲ್‌ ರಾಕ್‌ ಶಾಲೆಯ ಸಮರ್ಥ್‌ ಕುಡಲ್ಕರ್‌ ಹಾಗೂ ಡೆರಿಲ್‌ ಲೂಯಿಸ್‌ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು. ಟ್ರೋಫಿ ಹಾಗೂ 50 ಸಾವಿರ ರುಪಾಯಿ ಸ್ಕಾಲರ್‌ ಶಿಪ್‌ ಈ ಜೋಡಿಗೆ ದೊರೆಯಿತು.
ಮಂಡ್ಯದ ಪಿಇಎಸ್‌ ಪದವಿಪೂರ್ವ ಕಾಲೇಜಿನ ಸಂದೇಶ್‌ ಹಾಗೂ ಪ್ರಧಾನ್‌ ಎರಡನೇ ಸ್ಥಾನ ಗಳಿಸಿದರು. ಮೂರನೇ ಸ್ಥಾನ ಬಿಜಾಪುರಕ್ಕೆ. ಗುಮ್ಮಟನಗರಿಯ ಪಿಡಿಜೆ ಪದವಿಪೂರ್ವ ಕಾಲೇಜಿನ ಪ್ರಜ್ವಲ್‌ ಶೆಟ್ಟಿ ಹಾಗೂ ಶ್ರೀಕಾಂತ್‌ ಕುಲಕರ್ಣಿ ಮೂರನೇ ಸ್ಥಾನಕ್ಕೆ ಸಮಾಧಾನಗೊಳ್ಳಬೇಕಾಯಿತು. ದ್ವಿತೀಯ ಸ್ಥಾನ ಪಡೆದವರಿಗೆ ಟ್ರೋಫಿ ಹಾಗೂ 30 ಸಾವಿರ ರುಪಾಯಿ ಸ್ಕಾಲರ್‌ಷಿಪ್‌, ತೃತೀಯ ಸ್ಥಾನ ಪಡೆದವರಿಗೆ 20 ಸಾವಿರ ರು. ಸ್ಕಾಲರ್‌ಷಿಪ್‌ ಹಾಗೂ ಟ್ರೋಫಿ ದೊರೆಯಿತು.

ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದ ಎಲ್ಲ 16 ವಿದ್ಯಾರ್ಥಿಗಳಿಗೆ ಟಿಸಿಎಸ್‌ ಸಂಸ್ಥೆ ಕ್ಯಾಮೆರಾಗಳನ್ನು ಉಡುಗೊರೆಯಾಗಿ ನೀಡಿತು.

ವಿಜೇತರಿಗೆ ನ್ಯಾಸ್‌ಕಾಮ್‌ ಅಧ್ಯಕ್ಷ ಕಿರಣ್‌ ಕಾರ್ಣಿಕ್‌, ಐಟಿ- ಬಿಟಿ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ, ಟಿಸಿಎಸ್‌ ಉಪಾಧ್ಯಕ್ಷ ಎನ್‌.ಜಿ. ಸುಬ್ರಹ್ಮಣ್ಯಂ, ಎಸ್‌ಟಿಪಿಐ ನಿರ್ದೇಶಕ ಬಿ.ವಿ. ನಾಯ್ಡು, ಐಟಿ-ಬಿಟಿ ನಿರ್ದೇಶಕ ಜಾವೇದ್‌ ಅಖ್ತರ್‌ ಬಹುಮಾನಗಳನ್ನು ವಿತರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+