ಕ್ರೆೃಂಸ್ಟೋರಿಗೆ ರಸಕವಳ : ಕುಖ್ಯಾತ ರೌಡಿ ಬೆಕ್ಕಿನಕಣ್ಣು ರಾಜೇಂದ್ರ ಹತ್ಯೆ

ಬೆಂಗಳೂರು : ಭೂಗತ ಲೋಕದ ಕುಖ್ಯಾತ ಬೆಕ್ಕಿನ ಕಣ್ಣು ರಾಜೇಂದ್ರನನ್ನು ಅಪರಿಚಿತರ ಗುಂಪೊಂದು ಮಂಗಳ ರಾತ್ರಿ ಬರ್ಬರವಾಗಿ ಕೊಂದಿದೆ.

ನ.3ರ ಮಂಗಳವಾರ ರಾತ್ರಿ 8.45ರ ಸುಮಾರಿಗೆ ಇಂಡಸ್ತ್ರೀ ಹೌಸ್‌ ಗೇಟಿನ್‌ ಬಳಿ ಬೆಕ್ಕಿನ ಕಣ್ಣಿನ ರಾಜೇಂದ್ರನ ಹತ್ಯೆನಡೆದಿದೆ. ಚಾಲುಕ್ಯ ಹೋಟೆಲ್‌ ಬಳಿ ಘಫರು ನಿಲ್ಲಿಸಿ ಗೆಳೆಯರೊಂದಿಗೆ ಟೀ ಕುಡಿಯುದ್ದ ರಾಜೇಂದ್ರನ ಮೇಲೆ ಹಲ್ಲೆಯ ಪ್ರಯತ್ನ ನಡೆಯಿತು. ಸಾವಿನ ಮುನ್ಸೂಚನೆ ಕಂಡ ರಾಜೇಂದ್ರ ಹಂತಕರಿಂದ ದಾರಿ ಕಂಡ ಕಡೆಗೆಲ್ಲ ಓಡಿದರೂ ಉಪಯೋಗವಾಗಲಿಲ್ಲ .

ರಾಜೇಂದ್ರನ ಮುಖ, ಹೊಟ್ಟೆ ಹಾಗೂ ತಲೆಯ ಮೇಲೆ ಭೀಕರವಾಗಿ ದಾಳಿ ನಡೆಸಲಾಗಿದೆ. ಹಲ್ಲೆಯ ಭೀಕರತೆ ಎಷ್ಟಿತ್ತೆಂದರೆ ಮಿದುಳು ತಲೆಯಿಂದ ಬೇರ್ಪಟ್ಟು ಮೂರು ಅಡಿ ದೂರದಲ್ಲಿ ಚೂರಾಗಿ ಬಿದ್ದಿತ್ತು.

ಅಂದಿನ ಕುಖ್ಯಾತ ರೌಡಿ ಕೊತ್ವಾಲ್‌ ರಾಮಚಂದ್ರನನ್ನು ಕೊಲೆ ಮಾಡಿದ್ದ ಗುಂಪಿನಲ್ಲಿ ರಾಜೇಂದ್ರನೂ ಇದ್ದ ಎಂದು ಆರೋಪಿಸಲಾಗಿತ್ತು . ಈ ಆರೋಪಕ್ಕೆ ರಾಜೇಂದ್ರ ಸೆರೆಮನೆ ವಾಸವನೂ ಅನುಭವಿಸಿದ್ದ . ಈಚಿನ ದಿನಗಳಲ್ಲಿ ಬಿಡಿಎ ಗುತ್ತಿಗೆಗಳು ಹಾಗೂ ಇತರ ಭೂವ್ಯವಹಾರಗಳಲ್ಲಿ ರಾಜೇಂದ್ರ ಸಕ್ರಿಯನಾಗಿದ್ದ . ಕೆಲವು ರಾಜಿ ಪಂಚಾಯ್ತಿ ಪ್ರಕರಣಗಳಲ್ಲೂ ಆತನ ಹೆಸರು ಕೇಳಿಬರುತ್ತಿತ್ತು .

ರಾಜೇಂದ್ರ ಹಂತಕರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಮರಿಸ್ವಾಮಿ ತಿಳಿಸಿದ್ದಾರೆ.(ಇನ್ಫೋ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+