ರಾಜ್ಯೋತ್ಸವದಂದು ಸಾಮೂಹಿಕ ಆತ್ಮಹತ್ಯೆ;ಸಕ್ಕರೆ ಕಾರ್ಮಿಕರ ಬೆದರಿಕೆ
ರಾಜ್ಯೋತ್ಸವದಂದು ಸಾಮೂಹಿಕ ಆತ್ಮಹತ್ಯೆ;ಸಕ್ಕರೆ ಕಾರ್ಮಿಕರ ಬೆದರಿಕೆ
ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಒತ್ತಾಯ
ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಪುನರುಜ್ಜೀವನಗೊಳಿಸದಿದ್ದರೆ ನವಂಬರ್ 1ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾರ್ಖಾನೆಯ ನೌಕರರು ಎಚ್ಚರಿಸಿದ್ದಾರೆ.
ಕಳೆದ 20 ತಿಂಗಳಿಂದ ಸಕ್ಕರೆ ಕಾರ್ಖಾನೆಯ ರೈತರಿಗೆ ಸಂಬಳ ನೀಡಲಾಗಿಲ್ಲ . ಕಾರ್ಖಾನೆಯ ಎಲ್ಲ ನೌಕರರಿಗೂ ಬಾಕಿಯಿರುವ ಸಂಬಳವನ್ನು ತಕ್ಷಣವೇ ನೀಡಬೇಕು ಹಾಗೂ ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ 12 ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಯೆದುರು ರಾಜ್ಯೋತ್ಸವ ದಿನದಂದು ಆತ್ಮಹತ್ಯೆ ಮಾಡಿಕೊಳ್ಳುವರು ಎಂದು ರೈತ ಮತ್ತು ಕಾರ್ಮಿಕ ಜಂಟಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಕೆ. ಕಾಂತ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಫ್ಜಲ್‌ಪುರ, ಗುಲ್ಬರ್ಗಾ ಹಾಗೂ ಆಳಂದ ತಾಲ್ಲೂಕುಗಳಿಂದ ಕಾರ್ಖಾನೆಗೆ ಕೇವಲ 40 ಸಾವಿರ ಟನ್ ಕಬ್ಬು ಮಾತ್ರ ಪೂರೈಕೆಯಾಗುತ್ತಿದ್ದು , ಈ ಕಬ್ಬು ಕಾರ್ಖಾನೆಯ ಸಾಮರ್ಥ್ಯಕ್ಕೆ ಸಾಲುತ್ತಿಲ್ಲ . ಕಾರ್ಖಾನೆಯ ನೌಕರರ ಸಮೀಕ್ಷೆಯ ಪ್ರಕಾರ- ಕಾರ್ಖಾನೆ ವಲಯದಲ್ಲೇ ಸುಮಾರು 1.5 ಲಕ್ಷ ಟನ್ ಕಬ್ಬು ಲಭ್ಯವಿದೆ. ಆದರೂ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಕಾಂತಾ ದೂರಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications