ಹೌದು, ವೀರಪ್ಪನ್‌ ಡೈರಿ ಸಿಕ್ಕಿರುವುದು ನಿಜ -ಜ್ಯೋತಿಪ್ರಕಾಶ್‌ ಮಿರ್ಜಿ

ಹೌದು, ವೀರಪ್ಪನ್‌ ಡೈರಿ ಸಿಕ್ಕಿರುವುದು ನಿಜ -ಜ್ಯೋತಿಪ್ರಕಾಶ್‌ ಮಿರ್ಜಿ
ನರಹಂತಕ ವೀರಪ್ಪನ್‌ ಡೈರಿಯೇನೊ ಸಿಕ್ಕಿದೆ.. ಹೊರಬರುತ್ತವೆಯೇ ನಗ್ನ ಸತ್ಯಗಳು?

ಬೆಂಗಳೂರು : ತಮಿಳುನಾಡಿನ ಧರ್ಮಪುರಿ ಬಳಿ ಎಸ್‌ಟಿಎಫ್‌ ಗುಂಡಿಗೆ ಬಲಿಯಾಗಿದ್ದ ದಂತಚೋರ ವೀರಪ್ಪನ್‌ ಡೈರಿಯಾಂದು ಸಿಕ್ಕಿದೆ ಎನ್ನುವ ಸಂಗತಿಯನ್ನು ಕರ್ನಾಟಕದ ಎಸ್‌ಟಿಎಫ್‌ ಮುಖ್ಯಸ್ಥರಾದ ಜ್ಯೋತಿ ಪ್ರಕಾಶ್‌ ಮಿರ್ಜಿ ಒಪ್ಪಿಕೊಂಡಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೈರಿಯನ್ನು ಧರ್ಮಪುರಿ ಪೋಲೀಸರು ಸ್ವಾಧೀನ ಪಡಿಸಿಕೊಂಡಿದ್ದರು. ಅದನ್ನು ವೀರಪ್ಪನ್‌ತನಿಖೆಗಾಗಿ ಎಸ್‌ಟಿಎಫ್‌ ಬಳಸಿಕೊಂಡಿತ್ತು . ಆಡಳಿತ ವ್ಯಾಪ್ತಿಯ ಪರಿಮಿತಿಗಳಿರುವ ಕಾರಣ, ಡೈರಿಯಲ್ಲಿನ ವಿವರಗಳನ್ನು ನಾನು ನೋಡಲು ಸಾಧ್ಯವಾಗಿಲ್ಲ ಎಂದರು.

ಲಭ್ಯವಾಗಿರುವ ಡೈರಿ ಸಾಕಷ್ಟು ಕುತೂಹಲ ಮೂಡಿಸಿದೆ. ವೀರಪ್ಪನ್‌ ಸಾವಿನ ಹಿಂದಿದ್ದ ಅನುಮಾನಗಳು, ರಾಜಕೀಯ ಸಂಬಂಧಗಳು, ಅಪಹರಣದ ರಹಸ್ಯಗಳು ಇವೆಲ್ಲಕ್ಕೂ ಉತ್ತರ ಸಿಗುವ ನಿರೀಕ್ಷೆಗಳಿವೆ. ಡೈರಿ ವೀರಪ್ಪನ್‌ಚಟುವಟಿಕೆಗಳ ದಾಖಲೆಯಾಗಿದ್ದು, ಆತನ ಕಾರ್ಯತಂತ್ರಗಳು, ಅಪಹರಣಕ್ಕೆ ಮೊದಲು ನಡೆಸಿದ ಸಿದ್ಧತೆಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ ಎಂದರು.

ಸುಮಾರು 200 ಮಂದಿ ಇದ್ದ ವೀರಪ್ಪನ್‌ ತಂಡವನ್ನು ಜಂಟಿ ಎಸ್‌ಟಿಎಫ್‌ಕಾರ್ಯಾಚರಣೆ ಮೂಲಕ ಕೇವಲ ನಾಲ್ಕು ಮಂದಿಗೆ ಇಳಿಸಲಾಗಿತ್ತ್ತು. ಆದರೆ ವೀರಪ್ಪನ್‌ ಸಹಚರರ ಹೊಸ ನೇಮಕಾತಿಗೆ ಪ್ರಯತ್ನ ನಡೆಸಿದ್ದ ಎಂದು ಜ್ಯೋತಿಪ್ರಕಾಶ್‌ಮಿರ್ಜಿ ತಿಳಿಸಿದರು.

(ಪಿಟಿಐ)

ಮುಖಪುಟ / ವೀರಪ್ಪನ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+