ಸಮ್ಮಿಶ್ರ ಸರ್ಕಾರ ಕಷ್ಟ ,ಆದರೂ 5 ವರ್ಷ ಆಡಳಿತ ಖಚಿತ -ಎಸ್ಸೆಂ.ಕೃಷ್ಣ
ಸಮ್ಮಿಶ್ರ ಸರ್ಕಾರ ಕಷ್ಟ ,ಆದರೂ 5 ವರ್ಷ ಆಡಳಿತ ಖಚಿತ -ಎಸ್ಸೆಂ.ಕೃಷ್ಣ
ಸಮ್ಮಿಶ್ರ ಸರ್ಕಾರದಲ್ಲಿ ನಿರ್ಧಾರ ಕೈಗೊಳ್ಳಲು ವಿಳಂಬವಾಗುವುದು ಸಹಜ
ಐದು ತಿಂಗಳ ಸರ್ಕಾರದ ಸಂಪುಟ ವಿಸ್ತರಿಸಲು ಉಂಟಾಗುತ್ತಿರುವ ವಿಳಂಬದ ಕುರಿತು ಪ್ರತಿಕ್ರಿಯಿಸಿದ ಕೃಷ್ಣ - ಸಮ್ಮಿಶ್ರ ಸರ್ಕಾರ ನಡೆಸುವುದು ಕಷ್ಟ ಕಷ್ಟ ಎಂದರು. ಈ ಕಷ್ಟದ ಹಾದಿಯಲ್ಲೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆಗಳು ನಡೆಯುವ ಸಾಧ್ಯತೆಗಳಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಕೃಷ್ಣ ಪ್ರತಿಕ್ರಿಯಿಸಿದರು. ಅವರು ಅ.28ರ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲು ವಿಳಂಬವಾಗುವುದು ಸಹಜ. ಅಂತೆಯೇ ಕೈಗೊಂಡ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರುವುದೂ ಕಷ್ಟ . ಇವೆಲ್ಲವೂ ಸಮ್ಮಿಶ್ರ ಸರ್ಕಾರದ ಹೊಂದಾಣಿಕೆಯಲ್ಲಿ ತೆರಲೇಬೇಕಾದ ಶುಲ್ಕ ಎಂದು ಕೃಷ್ಣ ಮಾರ್ಮಿಕವಾಗಿ ನುಡಿದರು.
ಧರ್ಮಸಿಂಗ್ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಸ್ಪಷ್ಟ ಹೇಳಿಕೆ ನೀಡದೆ ನುಣುಚಿಕೊಂಡ ಕೃಷ್ಣ , ಸರ್ಕಾರ ಈಗಷ್ಟೇ ನೆಲೆ ಕಂಡುಕೊಳ್ಳುತ್ತಿದೆ ಎಂದರು. ಐದು ತಿಂಗಳ ಸರ್ಕಾರದ ಅವಧಿಯಲ್ಲಿ ತಾವು ಮೂರು ತಿಂಗಳ ವಿದೇಶ ಪ್ರವಾಸದಲ್ಲಿದ್ದು, ಎಂಟು ದಿನಗಳ ಹಿಂದಷ್ಟೇ ರಾಜ್ಯಕ್ಕೆ ವಾಪಸ್ಸಾಗಿದ್ದೇನೆ. ಈ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರದ ಪಕ್ಷಗಳ ಸಂಬಂಧ ಸುಧಾರಣೆಯ ಬಗ್ಗೆ ಗಮನಿಸುತ್ತಿದ್ದೇನೆ ಎಂದು ಕೃಷ್ಣ ಹೇಳಿದರು.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications