ಸಂಕಟ ಬಂದಾಗ ವೆಂಕಟರಮಣ: ಮತ್ತೆ ಕಮಲಧಾರಿಯಾದ ಅಡ್ವಾಣಿ !
ಸಂಕಟ ಬಂದಾಗ ವೆಂಕಟರಮಣ: ಮತ್ತೆ ಕಮಲಧಾರಿಯಾದ ಅಡ್ವಾಣಿ !
ಕಂಗೆಡದಿರಿ, ಕಷ್ಟದ ದಿನಗಳು ದೀರ್ಘವೇನೂ ಅಲ್ಲ- ವಾಜಪೇಯಿ
ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅಡ್ವಾಣಿ, ಬಿಜೆಪಿ ತನ್ನ ಸಿದ್ಧಾಂತದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಚುನಾವಣೆಯ ಬೆಲೆ ತೆತ್ತಾದರೂ ರಾಮಮಂದಿರ ನಿರ್ಮಾಣ ಖಚಿತ. ಮಂದಿರ ನಿರ್ಮಾಣದ ಬಗೆಗೆ ತಳೆದ ನಿಧಾನಗತಿ ಧೋರಣೆ ಚುನಾವಣೆಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತು. ಸ್ವಾತಂತ್ರ್ಯನಂತರ ದೇಶದಲ್ಲಿ ಆಯೋಧ್ಯೆ ಚಳವಳಿ ಸಮರ್ಥವಾಗಿ ಹೊರಹೊಮ್ಮಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ- ಕತ್ತಲು ಕಡೆಯವರೆಗೆ ಉಳಿಯುವುದಿಲ್ಲ. ಕಾರ್ಯಕರ್ತರು ಹೊಸ ಉತ್ಸಾಹದಿಂದ ಹೋರಾಟ ಆರಂಭಿಸಬೇಕು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications