ಪಾರ್ಟಿ ಟಿಕೆಟ್‌ ಕೊಟ್ರೆ ವಿಧಾನಸಭಾ ಚುನಾವಣೆಗೆ ರೆಡಿ - ಮುತ್ತುಲಕ್ಷ್ಮಿ

ಪಾರ್ಟಿ ಟಿಕೆಟ್‌ ಕೊಟ್ರೆ ವಿಧಾನಸಭಾ ಚುನಾವಣೆಗೆ ರೆಡಿ - ಮುತ್ತುಲಕ್ಷ್ಮಿ
ನರಹಂತಕ ವೀರಪ್ಪನ್‌ ಸತ್ತ ವಾರದಲ್ಲಿಯೇ ಹೊರಬಿದ್ದಿದೆ ಮುತ್ತುಲಕ್ಷಿ ್ಮಕನಸು

ಮೆಟ್ಟೂರು: ನರಹಂತಕ ದಂತಚೋರ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿ ರಾಜಕೀಯ ಸೇರುವ ಸಾಧ್ಯತೆಗಳಿವೆ. 2006 ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯವನ್ನು ಅವರು ಹೊಂದಿದ್ದಾರೆ.

ಗಂಡನನ್ನು ಎಸ್‌ಟಿಎಫ್‌ ಕಾರ್ಯಾಚರಣೆಯಲ್ಲಿ ವಾರದ ಹಿಂದಷ್ಟೇ ಕಳೆದುಕೊಂಡಿರುವ ಮುತ್ತುಲಕ್ಷ್ಮಿ ಮೆಟ್ಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ತೋಡಿಕೊಂಡರು.

ಯಾವ ರಾಜಕೀಯ ಪಕ್ಷವಾದರೂ ನನ್ನನ್ನು ಗುರ್ತಿಸಿ ಟಿಕೇಟ್‌ ನೀಡಿದರೆ ಕಣಕ್ಕಿಳಿಯುತ್ತೇನೆ ಎನ್ನುವ ಮುತ್ತುಲಕ್ಷ್ಮಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಷ್ಟವಿಲ್ಲ. ರಾಧಿಕಾ ಸೆಲ್ವಿ(ಈಕೆಯ ಗಂಡನನ್ನು ಪೋಲೀಸರು ಕೊಂದಿದ್ದಾರೆ) ಡಿಎಂಕೆ ಟಿಕೇಟ್‌ ಪಡೆದು ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗಿರುವುದು ಮುತ್ತು ಲಕ್ಷ್ಮಿಯಲ್ಲಿ ಬಯಕೆಗಳ ತಂದಿದೆ. ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಕರುಣಾನಿಧಿ ಪಕ್ಷ ಸಹಕರಿಸುತ್ತದೆ ಎನ್ನುವ ವಿಶ್ವಾಸ ಆಕೆಯದು.

ಮುತ್ತುಲಕ್ಷ್ಮಿ1980 ರಲ್ಲಿ ಕಾಡುಗಳ್ಳ ವೀರಪ್ಪನ್‌ನನ್ನು ಮದುವೆಯಾದಳು. ಆಕೆ ಮೆಟ್ಟೂರು ಡ್ಯಾಮ್‌ ಬಳಿ ಟೀಸ್ಟಾಲ್‌ ಒಂದನ್ನು 1990 ರಲ್ಲಿ ನಡೆಸುತ್ತಿದ್ದಳು. ಗಣಿಗಾರಿಕೆ ಆ ಭಾಗದಲ್ಲಿ ಶುರುವಾದಾಗ, ಅದರಲ್ಲಿ ಪ್ರಮುಖ ಪಾತ್ರವಹಿಸಿದ್ದಳು. ಗೋಪಿನಾಥಂ ಗ್ರಾಮದಲ್ಲಿ ವೀರಪ್ಪನ್‌ನ ಹಿರಿಯ ಸಹೋದರ ಮುತ್ತಯ್ಯ ಮತ್ತು ಮುತ್ತುಲಕ್ಷ್ಮಿ, ಹದಿನೆಂಟು ಎಕರೆ ಪ್ರದೇಶವನ್ನು ಕೃಷಿಯೋಗ್ಯವಾಗಿ ಪರಿವರ್ತಿಸಿ ಶೇಂಗಾ ಬೆಳೆಯುತ್ತಿದ್ದರು. ಮುತ್ತುಲಕ್ಷ್ಮಿ ಸಹಾ ಪೋಲೀಸ್‌ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾಳೆ.

(ಏಜನ್ಸೀಸ್‌)

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+