ಚಿಕ್ಕಮಗಳೂರು: ಮತ್ತೊಂದು ದತ್ತ ಹುತ್ತ, ಶಾಸಕನಿಂದಆತ್ಮಾಹುತಿ ಯತ್ನ
ಚಿಕ್ಕಮಗಳೂರು: ಮತ್ತೊಂದು ದತ್ತ ಹುತ್ತ, ಶಾಸಕನಿಂದಆತ್ಮಾಹುತಿ ಯತ್ನ
ದತ್ತಾತ್ರೇಯ ವಿಗ್ರಹ ಸಂಪೂರ್ಣ ತೆರವು, ಮಂಟಪ ನಾಶ
ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ದತ್ತಮಾಲೆ ಅಭಿಯಾನ ಈ ವರ್ಷ ಕಾವೇರಿತ್ತು. ಬಿಜೆಪಿ ಮತ್ತು ಸಂಘ ಪರಿವಾರ ವಿವಾದಾತ್ಮಕ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ ದತ್ತಾತ್ರೇಯ ವಿಗ್ರಹ ಮತ್ತು ಮಂಟಪವನ್ನು ಜಿಲ್ಲಾಡಳಿತ ಮಂಗಳವಾರ(ಅಕ್ಟೋಬರ್ 26) ಸಂಪೂರ್ಣವಾಗಿ ತೆರವುಗೊಳಿಸಿದೆ. ಈ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತ ಪಡಿಸಿ, ಆತ್ಮಹತ್ಯೆಗೆ ಪ್ರಯತ್ನಿಸಿದ ಶಾಸಕ ಸಿ.ಟಿ. ರವಿ ಸೇರಿದಂತೆ 38 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.
ವಿಜಯಪುರ ಬಡಾವಣೆಯ ದುರ್ಗಾದೇವಿ ಮಂಟಪದಲ್ಲಿ ದತ್ತಾತ್ರೇಯ ವಿಗ್ರಹದ ಪ್ರತಿಷ್ಠಾಪನೆಗೆ ಸಂಘಪರಿವಾರ ಅನುಮತಿ ಕೋರಿತ್ತು. ಶಾಂತಿಭಂಗವಾಗುವ ಸಾಧ್ಯತೆಗಳಿವೆ ಎಂದು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ನಿರಾಕರಣೆಗೆ ಸೊಪ್ಪು ಹಾಕದೇ ಅದೇ ಪ್ರದೇಶದಲ್ಲಿ ದತ್ತಾತ್ರೇಯ ವಿಗ್ರಹವನ್ನು ದಿಢೀರ್ ಪ್ರತಿಷ್ಠಾಪಿಸಿ, ಮಂಟಪವನ್ನು ನಿರ್ಮಿಸಲಾಗಿತ್ತು. ಈ ವಿವಾದಾತ್ಮಕ ಪ್ರದೇಶ ಈದ್ಗಾ ಸಮಿತಿಗೆ ಸೇರಿದ್ದು /ನಗರಸಭೆಗೆ ಸೇರಿದ್ದು ಎಂಬ ಗೊಂದಲಗಳಿವೆ.
ಚಿಕ್ಕಮಗಳೂರು ಬಂದ್: ಈ ಘಟನೆಯ ಪರಿಣಾಮ ಚಿಕ್ಕಮಗಳೂರು ತಲ್ಲಣಗೊಂಡಿದೆ. ಉದ್ರಿಕ್ತ ವಾತಾವರಣದ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರ ಬುಧವಾರ (ಅ.27) ಚಿಕ್ಕಮಗಳೂರು ಬಂದ್‌ಗೆ ಕರೆ ಕೊಟ್ಟಿವೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications