ಆಮದು ವಸ್ತುಗಳ ಮೇಲೆ ವಿಧಿಸಲಾಗಿದ್ದ ‘ವಿಶೇಷ ತೆರಿಗೆ ’ರದ್ದು
ಆಮದು ವಸ್ತುಗಳ ಮೇಲೆ ವಿಧಿಸಲಾಗಿದ್ದ ‘ವಿಶೇಷ ತೆರಿಗೆ ’ರದ್ದು
ಕೆಎಸ್‌ಟಿಯಲ್ಲಿ ನೋಂದಣಿಗೊಂಡ ವ್ಯಾಪಾರಸ್ಥರಿಗೆ ವಿನಾಯಿತಿ ಒದಗಿಸಲಾಗಿದೆ
ಅಕ್ಟೋಬರ್ 1ರಿಂದ ಹೊರ ರಾಜ್ಯದಿಂದ ತರುವ ಎಲ್ಲಾ ವಸ್ತುಗಳ ಮೇಲೆ ವಿಶೇಷ ಪ್ರವೇಶ ತೆರಿಗೆ ವಿಧಿಸಲಾಗಿತ್ತು. ಇದರ ಬಗೆಗೆ ಕೈಗಾರಿಕೋದ್ಯಮಿಗಳು ಮತ್ತು ವ್ಯಾಪರಸ್ಥರು ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಸರಕಾರ ಮೆದು ನೀತಿ ಅನುಸರಿಸಿದೆ.
ಅಕ್ಟೋಬರ್1 ರೊಳಗೆ ಕೆಎಸ್‌ಟಿಯಡಿಯಲ್ಲಿ ನೋಂದಣಿ ಪಡೆದ ವ್ಯಾಪರಸ್ಥರು ಹೊರ ರಾಜ್ಯದಿಂದ ಯಾವುದೇ ವಸ್ತುವನ್ನು ಮಾರಾಟಕ್ಕಾಗಲಿ ಅಥವಾ ಕಚ್ಚಾಪದಾರ್ಥ ತಂದರೆ ಅದಕ್ಕೆ ವಿಶೇಷ ತೆರಿಗೆ ವಿಧಿಸಲಾಗುವುದಿಲ್ಲ.ಆದರೆ ಯಾರು ಕೆ ಎಸ್‌ಟಿಯಡಿಯಲ್ಲಿ ನೋಂದಾಣಿಗೊಳ್ಳದ ವ್ಯಾಪರಸ್ಥರಿಗೆ ಅಕ್ಟೋಬರ್ 1ರಿಂದ ಜಾರಿಯಲ್ಲಿರುವ ವಿಶೇಷ ಪ್ರವೇಶ ತೆರಿಗೆ ಮುಂದುವರೆಯುತ್ತದೆ.
ವ್ಯಾಪರಸ್ಥರು ಹೊರ ರಾಜ್ಯದಿಂದ ಯಾವುದೇ ವಸ್ತುಗಳನ್ನು ತರುವಾಗ ಸಂಬಂಧಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಚೆಕ್‌ಪೋಸ್ಟ್ ಅಧಿಕಾರಿಗಳಿಗೆ ತೋರಿಸಬೇಕು. ಮತ್ತು ಅಧಿಕಾರಿಗಳು ವಾಹನದಲ್ಲಿನ ವಸ್ತುಗಳನ್ನು ತಪಾಸಣೆ ಮಾಡಬಹುದಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications