ಬೀದರ್‌, ಗುಲ್ಪರ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಸ್ಥಿತಿ ಕಷ್ಟ ಕಷ್ಟ !

ಬೀದರ್‌, ಗುಲ್ಪರ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಸ್ಥಿತಿ ಕಷ್ಟ ಕಷ್ಟ !
ವೀರಶೈವ ಧರ್ಮ ಜಗತ್ತಿನಲ್ಲಿಯೇ ಸರ್ವಶ್ರೇಷ್ಠ-ಸಚಿವ ರಾಜಶೇಖರನ್‌

ಬೆಂಗಳೂರು: ಕೇಂದ್ರ ಸರಕಾರ ರಾಷ್ಟ್ರದಲ್ಲಿ ಅತಿ ಹಿಂದುಳಿದ 135 ಜಿಲ್ಲೆಗಳನ್ನು ಗುರ್ತಿಸಿದೆ. ರಾಜ್ಯದ ನಾಲ್ಕು ಜಿಲ್ಲೆಗಳು ಆ ಪಟ್ಟಿಯಲ್ಲಿವೆ. ಹಂತಹಂತವಾಗಿ ಅವುಗಳ ಪ್ರಗತಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಕೇಂದ್ರ ಯೋಜನಾ ರಾಜ್ಯಸಚಿವ ಎಂ.ವಿ. ರಾಜಶೇಖರನ್‌ ತಿಳಿಸಿದರು.

ನಗರದಲ್ಲಿ ವೀರಶೈವ ವಕೀಲರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀದರ್‌, ಗುಲ್ಪರ್ಗ, ದಾವಣಗೆರೆ, ಚಿತ್ರದುರ್ಗ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ವಿಷಯವನ್ನು ಬಹಿರಂಗಪಡಿಸಿದರು.

ಜಗತ್ತಿನ ಎಲ್ಲಾ ಧರ್ಮಗಳ ಶ್ರೇಷ್ಠ ಅಂಶಗಳನ್ನು ವೀರಶೈವ ಧರ್ಮ ಮೈಗೂಡಿಸಿಕೊಂಡಿದೆ. ಹೀಗಾಗಿ ವೀರಶೈವ ಧರ್ಮ ಜಗತ್ತಿನಲ್ಲಿ ಸರ್ವಶ್ರೇಷ್ಠವಾಗಿದ್ದು, ಎಲ್ಲರಿಗೂ ಲೇಸನ್ನೇ ಬಯಸುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಭೀಮಣ್ಣ ಖಂಡ್ರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಕೇಂದ್ರ ಸಚಿವ ಬಸವರಾಜ ಅನ್ವರಿ, ಕೆ.ಎನ್‌. ರಾಜಶೇಖರ್‌, ಎಸ್‌.ಎಸ್‌. ಪಾಟೀಲ್‌ ಮತ್ತಿತರರು ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+