ಧರ್ಮ ಪತನ ಸನ್ನಿಹಿತ ; 2005 ಏಪ್ರಿಲ್‌ನಲ್ಲಿ ಚುನಾವಣೆ -ಜ್ಯೋತಿಷಿ
ಧರ್ಮ ಪತನ ಸನ್ನಿಹಿತ ; 2005 ಏಪ್ರಿಲ್‌ನಲ್ಲಿ ಚುನಾವಣೆ -ಜ್ಯೋತಿಷಿ
ಸಂಪುಟ ವಿಸ್ತರಣೆಯೇ ಸರ್ಕಾರದ ಪತನಕ್ಕೆ ಮೂಲ
ಉಮಾಪತಿ ಶಾಸ್ತ್ರಿಗಳು ಹೇಳಿರುವುದಿಷ್ಟು- ಕರ್ನಾಟಕದ ಜನ ಮುಂದಿನ ಚುನಾವಣೆಗೆ ಸಿದ್ಧರಾಗಬೇಕು. ಸರಕಾರ ಯಾವಾಗ ಬೇಕಾದರೂ ಉರುಳಬಹುದು, 2005ರ ಏಪ್ರಿಲ್ ವೇಳೆಗೆ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚು.
ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಪಕ್ಷಗಳ ನಡುವೆ ಅತೃಪ್ತಿ ಮೂಡಿಸಲಿದೆ. ಈ ಅತೃಪ್ತಿಯ ಪರಿಣಾಮ ಮೈತ್ರಿಕೂಟದ ಸರಕಾರ ಇಕ್ಕಟ್ಟಿಗೆ ಸಿಲುಕಲಿದೆ ಎಂದು ಶಾಸ್ತ್ರಿಗಳು ಹೇಳಿದ್ದಾರೆ.
ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತಕಗಳ ಆಧಾರದ ಮೇಲೆ ಈ ಜ್ಯೋತಿಷ್ಯವನ್ನು ಉಮಾಪತಿ ಶಾಸ್ತ್ರಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications