ವೀರಪ್ಪನ್ ಸಾವಿನ ನಂತರ ಮುತ್ತುಲಕ್ಷ್ಮಿನಡೆ ಏನು ? ಆಕೆ ಹೇಳುತ್ತಾಳೆ...
ವೀರಪ್ಪನ್ ಸಾವಿನ ನಂತರ ಮುತ್ತುಲಕ್ಷ್ಮಿನಡೆ ಏನು ? ಆಕೆ ಹೇಳುತ್ತಾಳೆ...
ವೀರಪ್ಪನ್‌ಪುತ್ರಿಯರ ಕಂಗಳಲ್ಲಿ ಡಾಕ್ಟರ್-ಐಎಎಸ್ ಅಧಿಕಾರಿಯಾಗುವ ಕನಸು!
ವೀರಪ್ಪನ್ ಸಂಗ್ರಹಿಸಿದ್ದ ಎನ್ನಲಾಗುವ ಕೋಟ್ಯಾಂತರ ರೂ.ಗಳನ್ನು ಕಾಡಿನ ಹಳ್ಳ-ಗುಂಡಿಗಳಿಂದ ಹೊರತೆಗೆಯುವ ನೆಪದಲ್ಲಿ ಇಲ್ಲಿನ ಜನರನ್ನು ಶೋಷಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಎಸ್‌ಟಿಎಫ್ ನನ್ನನ್ನು ನೆಮ್ಮದಿಯಾಗಿರಲು ಬಿಟ್ಟಿಲ್ಲ . ಅನಗತ್ಯ ಕಿರುಕುಳಗಳ ಮೂಲಕ ಪೊಲೀಸರು ಕುಟುಂಬದ ಶಾಂತಿಕದಡಿದ್ದಾರೆ ಎಂದು ಮುತ್ತುಲಕ್ಷ್ಮಿ ಆರೋಪಿಸಿದ್ದಾಳೆ.
ನನ್ನ ಮಕ್ಕಳಿಬ್ಬರೂ ವಯಸ್ಸಿಗೆ ಬಂದಿದ್ದಾರೆ. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಗಂಡನನ್ನು ಕಳೆದುಕೊಂಡು ನಾನೀಗ ಅನಾಥಳಾಗಿದ್ದೇನೆ. ನನ್ನ ಮಕ್ಕಳಾದ ವಿದ್ಯಾರಾಣಿ(14) ಮತ್ತು ಪ್ರಭಾ(11)ಳ ವಿದ್ಯಾಭ್ಯಾಸಕ್ಕೆ ತಮಿಳುನಾಡು ಸರಕಾರ ನೆರವು ನೀಡಬೇಕು ಎಂದು ಮುತ್ತುಲಕ್ಷ್ಮಿ ಕೋರಿದ್ದಾಳೆ.
ಕನಸು : ಏನೇ ಕಷ್ಟವಾದರೂ ಮಕ್ಕಳ ವಿದ್ಯಾಭ್ಯಾಸ ಅಪೂರ್ಣವಾಗಲು ಬಿಡುವುದಿಲ್ಲ. ಅವರನ್ನು ಶ್ರೇಷ್ಠ ಪೌರರನ್ನಾಗಿಸುವುದು ನನ್ನ ಗುರಿ. ನನ್ನ ಹಿರಿಯ ಮಗಳು ವಿದ್ಯಾಳಿಗೆ ಡಾಕ್ಟರ್ ಆಗುವ ಕನಸಿದೆ. ಪ್ರಭಾಳಿಗೆ ಐಎಎಸ್ ಅಧಿಕಾರಿಯಾಗುವ ಬಯಕೆ ಇದೆ. ಹೊಟ್ಟೆ ಪಾಡಿಗಾಗಿ ಸಣ್ಣ ಪುಟ್ಟ ವ್ಯಾಪಾರ ಮಾಡಲು ಯೋಚಿಸುತ್ತಿದ್ದೇನೆ. ಧರ್ಮಪುರಿ ಜಿಲ್ಲೆಯಲ್ಲಿ ತನ್ನ ತಾಯಿಯಾಂದಿಗೆ ವಾಸಿಸುತ್ತಿರುವುದಾಗಿ ಮುತ್ತುಲಕ್ಷ್ಮಿ ತಿಳಿಸಿದ್ದಾಳೆ.
(ಏಜನ್ಸೀಸ್)
ಮುಖಪುಟ / ವೀರಪ್ಪನ್












Click it and Unblock the Notifications