ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಎಂ.ಪಿ.ಪ್ರಕಾಶ್ ನೇತೃತ್ವದ ಸಮಿತಿ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಎಂ.ಪಿ.ಪ್ರಕಾಶ್ ನೇತೃತ್ವದ ಸಮಿತಿ
ಅರ್ಜಿಗಳ ಮಹಾಪೂರ... 57 ಮಂದಿಗೆ ಮಾತ್ರ ಪ್ರಶಸ್ತಿ
ಅರ್ಥಶಾಸ್ತ್ರಜ್ಞ ಡಾ.ಡಿ.ಎಂ. ನಂಜುಡಪ್ಪ , ಹಿರಿಯ ಸಾಹಿತಿ ಡಾ.ದೇ.ಜವರೇಗೌಡ, ಕಲಾವಿದ ಎಸ್.ಜಿ. ವಾಸು ದೇವ್, ಡಾ.ಕಮಲಾ ಹಂಪನಾ, ಡಾ. ಸಿದ್ಧಲಿಂಗಯ್ಯ, ವಸಂತ ಕುಷ್ಟಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಷಾ ಗಣೇಶನ್ ಮತ್ತು ಮುದ್ದುಮೋಹನ್‌ರನ್ನು ಸಮಿತಿ ಒಳಗೊಂಡಿದೆ.
ಸಾಹಿತ್ಯ, ಜಾನಪದ, ವೈದ್ಯಕೀಯ, ಸಮಾಜಸೇವೆ, ಪತ್ರಿಕೋದ್ಯಮ, ಸಿನಿಮಾ, ನಾಟಕ, ವಿಜ್ಞಾನ, ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 57 ಮಂದಿಯನ್ನ್ನು ಸಮಿತಿ ಗುರ್ತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಿದೆ. ಪ್ರಶಸ್ತಿಗಾಗಿ ಅರ್ಜಿಗಳ ಮಹಾಪೂರವೇ ಹರಿದು ಬಂದಿದ್ದು, ಅರ್ಹರನ್ನು ಗುರ್ತಿಸುವ ಹೊಣೆಗಾರಿಕೆ ಸಮಿತಿಯ ಮೇಲಿದೆ.
(ಇನ್ಫೋ ವಾರ್ತೆ)
ಎಂ.ಪಿ.ಪ್ರಕಾಶ್ ಗಮನಕ್ಕೆ
ವೀಣಾಧರಿ ಎಂಬ ಸೋದರಿ ವರ್ಷದ ಕನ್ನಡತಿಯಾಗಲಿ !
ಮುಖಪುಟ / ವಾರ್ತೆಗಳು












Click it and Unblock the Notifications