ಬನ್ನೇರುಘಟ್ಟ, ಸರ್ಜಾಪುರ, ಮಾರತಹಳ್ಳಿರಸ್ತೆಗಳ ಮೋಕ್ಷಕ್ಕೆ 34 ಕೋಟಿ
ಬನ್ನೇರುಘಟ್ಟ, ಸರ್ಜಾಪುರ, ಮಾರತಹಳ್ಳಿರಸ್ತೆಗಳ ಮೋಕ್ಷಕ್ಕೆ 34 ಕೋಟಿ
2005 ನವೆಂಬರ್ ಒಳಗೆ ಬೆಂಗಳೂರು ರಸ್ತೆಗಳಿಗೆ ಹೇಮಾಮಾಲಿನಿ ಕೆನ್ನೆಯ ಹೊಳಪು!
ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ , 34 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಮೂರು ರಸ್ತೆಗಳ ಅಭಿವೃದ್ಧಿಗೆ ಸರಕಾರ ಮುಂದಾಗಿದೆ. 50:50 ಅನುಪಾತದಲ್ಲಿ ರಾಜ್ಯಸರಕಾರ ಹಾಗೂ ಐಟಿ ಕಂಪನಿಗಳು ಯೋಜನೆಯ ಹಣವನ್ನು ಭರಿಸಲಿವೆ. ನವೆಂಬರ್ 15 ರಿಂದ ಕಾಮಗಾರಿಗಳು ಬಿರುಸಿನ ವೇಗದಲ್ಲಿ ಆರಂಭವಾಗಲಿವೆ.
ಹಾಯ್ ಎನ್ನುವ ರಸ್ತೆಗಳು : ಈ ಯೋಜನೆಯಿಂದ ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ ಹಾಗೂ ಮಾರತಹಳ್ಳಿ ರಸ್ತೆಗಳಿಗೆ ಮೋಕ್ಷ ದೊರಕಲಿದೆ. ರಸ್ತೆಗಳ ಅಭಿವೃದ್ಧಿ ಐಟಿ ಕ್ಷೇತ್ರದ ಪ್ರಗತಿಗೆ ಪೂರಕವಾಗಲಿದೆ. ಅಲ್ಲದೇ ನಗರದ ಎಲ್ಲಾ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲು ಸರಕಾರ ನಿರ್ಧರಿಸಿದೆ. ನವೆಂಬರ್ 2005 ರ ಒಳಗಾಗಿ ನಗರದ ಎಲ್ಲಾ ಪ್ಲೈಓವರ್‌ಗಳು ಮತ್ತು ರಸ್ತೆ ಕಾಮಗಾರಿಗಳ ಮುಗಿಸಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಭರವಸೆ ನೀಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications