ಭದ್ರತೆ, ಅಪಾರ ಕುತೂಹಲಿಗಳ ಸಮ್ಮುಖದಲ್ಲಿ ವೀರಪ್ಪನ್ ಅಂತ್ಯಕ್ರಿಯೆ
ಭದ್ರತೆ, ಅಪಾರ ಕುತೂಹಲಿಗಳ ಸಮ್ಮುಖದಲ್ಲಿ ವೀರಪ್ಪನ್ ಅಂತ್ಯಕ್ರಿಯೆ
ಪೊಲೀಸರ ವಿರುದ್ಧ ಮುತ್ತುಲಕ್ಷ್ಮಿ ಆಕ್ರೋಶ
ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ , ಮಗಳು ವಿಜಯರಾಣಿ ಯುವರಾಣಿ ಹಾಗೂ ಆತನ ಸೋದರನ ಪತ್ನಿ ಮುನಿಯಮ್ಮ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಾಜರಿದ್ದರು. ಪ್ರಸ್ತುತ ಕೊಯಮತ್ತೂರು ಜೈಲಿನಲ್ಲಿರುವ ವೀರಪ್ಪನ್ ಸೋದರ ಮಥಾಯಿನ್‌ಗೆ ಸೇರಿದ ಭೂಮಿಯಲ್ಲಿ ವೀರಪ್ಪನ್ ಅಂತ್ಯಕ್ರಿಯೆ ನಡೆಯಿತು.
ಅ.20ರ ಬೆಳಗ್ಗೆ 6.35ರ ಸುಮಾರಿಗೆ ನಡೆದ ನರಹಂತಕನ ಅಂತ್ಯಕ್ರಿಯೆ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು .
ಮುತ್ತುಲಕ್ಷ್ಮಿ ಆಕ್ರೋಶ
ವೀರಪ್ಪನ್‌ನ ಸ್ವಂತ ಸ್ಥಳವಾದ ಕರ್ನಾಟಕದಲ್ಲಿನ ಗೋಪಿನಾಥಂಗೆ ಆತನ ದೇಹವನ್ನು ಒಯ್ಯಲು ಅವಕಾಶ ನಿರಾಕರಿಸಿದ ಸೇಲಂನ ಪೊಲೀಸ್ ಅಧೀಕ್ಷಕರ ವಿರುದ್ಧ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀರಪ್ಪನ್ ಶರೀರವನ್ನು ಮಂಗಳವಾರ ರಾತ್ರಿ ಧರ್ಮಪುರಿ ಸರ್ಕಾರಿ ಆಸ್ಪತ್ರೆಯಿಂದ ಮೆಟ್ಟೂರಿಗೆ ತರಲಾಗಿತ್ತು .
(ಏಜನ್ಸೀಸ್)
ಮುಖಪುಟ / ವೀರಪ್ಪನ್












Click it and Unblock the Notifications