ವೀರಪ್ಪನ್‌ ಶವ ಪಡೆಯಲು ಧರ್ಮಪುರಿಆಸ್ಪತ್ರೆಗೆ ಮುತ್ತು ಲಕ್ಷ್ಮಿಆಗಮನ

ವೀರಪ್ಪನ್‌ ಶವ ಪಡೆಯಲು ಧರ್ಮಪುರಿಆಸ್ಪತ್ರೆಗೆ ಮುತ್ತು ಲಕ್ಷ್ಮಿಆಗಮನ
ವೀರಪ್ಪನ್‌ ಬೇಟೆಗೆ ಕಾರಣವಾದ ಬೇಹುಗಾರಿಕೆ ವರದಿ

ಧರ್ಮಪುರಿ: ಬೇಹುಗಾರಿಕೆ ನೀಡಿದ ವರದಿ ವೀರಪ್ಪನ್‌ ಬೇಟೆಗೆ ಮೂಲಕಾರಣ. ತಮಿಳುನಾಡು ಟಾಸ್ಕ್‌ಪೋರ್ಸ್‌ಗೆ ವೀರಪ್ಪನ್‌ ಸೇರಿದಂತೆ ನಾಲ್ಕು ಮಂದಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಯತ್ತ ತೆರಳುತ್ತಿದ್ದಾರೆ ಎಂಬ ಮಾಹಿತಿ ದೊರಕಿತ್ತು.

ಎಸ್‌ಟಿಎಫ್‌ ಬಲೆ ಹಾಕಿ ಹೊಂಚು ಹಾಕುತ್ತಿತ್ತು. ಆರಂಭದಲ್ಲಿ ಶರಣಾಗುವಂತೆ ಮೈಕ್‌ನಲ್ಲಿ ಪೋಲೀಸರು ಮಾಡಿದ ಮನವಿಗೆ ಆತ ಬೆಲೆ ನೀಡಲಿಲ್ಲ. ಎಸ್‌ಟಿಎಫ್‌ ಮತ್ತು ವೀರಪ್ಪನ್‌ನಡುವೆ 20 ನಿಮಿಷಗಳ ಗುಂಡಿನ ಆಟ ನಡೆಯಿತು. ಕಡೆಗೆ ಸ್ಥಳದಲ್ಲೇ ವೀರಪ್ಪನ್‌ ಗುಂಡಿಗೆ ಬಲಿಯಾದ. ಉಳಿದ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

ಪತಿಗಾಗಿ ಬಂದ ಪತ್ನಿ: ಗಂಡನ ಅಂತಿಮ ದರ್ಶನ ಪಡೆದು, ಆತನ ದೇಹವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಧರ್ಮಪುರಿ ಆಸ್ಪತ್ರೆಗೆ ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿ ಮಂಗಳವಾರ(ಅಕ್ಟೋಬರ್‌ 19) ಮಧ್ಯಾಹ್ನ ಆಗಮಿಸಿದ್ದಳು.

ವೀರಪ್ಪನ್‌ ಸಾವಿನಿಂದ ಕಂಗಾಲಾದಂತೆ ಕಂಡು ಬಂದ ಮುತ್ತುಲಕ್ಷ್ಮಿ, ಪತ್ರಕರ್ತರೊಂದಿಗೆ ಮಾತನಾಡಲು ಇಷ್ಟಪಡಲಿಲ್ಲ. ಪೋಟೋ ತೆಗೆಯಲು ಪ್ರಯತ್ನಿಸಿದ ಛಾಯಾಗ್ರಾಹಕರು, ಆಕೆಯ ಕೆಟ್ಟ ಬೈಗುಳವನ್ನು ಕೇಳಬೇಕಾಯಿತು. ಸೇತುಕುಳಿ ಗೋವಿಂದನ್‌ ಬಂಧುಗಳು ಆತನ ದೇಹವನ್ನು ಪಡೆಯಲು ಆಸ್ಪತ್ರೆಗೆ ಬಂದಿದ್ದರು.

ಇವ ವೀರಪ್ಪನ್‌ ಅಲ್ಲ: ಟಿವಿ ಹಾಗೂ ಪತ್ರಿಕೆಗಳಲ್ಲಿ ವೀರಪ್ಪನ್‌ ಶವದ ಪೋಟೋ ನೋಡಿದವರು, ಸತ್ತವನು ವೀರಪ್ಪನ್‌ ಅಲ್ಲ ಎಂಬ ಸಂಶಯದಲ್ಲಿದ್ದಾರೆ. ಮುಖದ ತುಂಬ ದಟ್ಟ ಮೀಸೆಯಿಂದಲೇ ಗುರ್ತಿಸಿಕೊಂಡಿದ್ದ, ವೀರಪ್ಪನ್‌ ಮೀಸೆಯನ್ನು ಚೊಕ್ಕವಾಗಿ ಕತ್ತರಿಸಿಕೊಂಡಿರುವುದೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ. ಡಿಎನ್‌ಎ ಪರೀಕ್ಷೆ ವೀರಪ್ಪನ್‌ ಈತನೇ ಎಂಬುದನ್ನು ಖಚಿತ ಪಡಿಸಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+