ಉತ್ತರ ಕರ್ನಾಟಕದಲ್ಲಿ ಎರಡು ಸರ್ಕಿಟ್ ಪೀಠ ಸ್ಥಾಪನೆಗೆ ಹಸಿರು ನಿಶಾನೆ
ಉತ್ತರ ಕರ್ನಾಟಕದಲ್ಲಿ ಎರಡು ಸರ್ಕಿಟ್ ಪೀಠ ಸ್ಥಾಪನೆಗೆ ಹಸಿರು ನಿಶಾನೆ
ಸರ್ಕಿಟ್ ಪೀಠ ನೀಡಿದ್ದಕ್ಕೆ ಥ್ಯಾಂಕ್ಸ್, ಈಗ ಹೈಕೋರ್ಟ್ ಪೀಠ ನೀಡಿ!
ಗುಲ್ಪರ್ಗ ಮತ್ತು ಹುಬ್ಬಳ್ಳಿಯಲ್ಲಿ ಸರ್ಕಿಟ್ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು, ಭಾನುವಾರ(ಅ.17) ಹೈಕೋರ್ಟ್ ನ್ಯಾಯಾಧೀಶ ಎನ್.ಕೆ. ಜೈನ್ ಜೊತೆ ನಡೆಸಿದ ಮಾತುಕತೆಗಳು ಫಲಿಸಿವೆ. ಸರ್ಕಿಟ್ ಪೀಠಕ್ಕೆ ಅಗತ್ಯವಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ಪೀಠ: ಉತ್ತರ ಕರ್ನಾಟಕದಲ್ಲಿ ಪೀಠ ಚಳವಳಿ ಪ್ರಸ್ತುತ ತೀವ್ರಗೊಂಡಿತ್ತು. ಪೀಠದ ಹೋರಾಟ, ಪ್ರತ್ಯೇಕ ರಾಜ್ಯದ ಚಳವಳಿಯಾಗಿ ಹೊಸ ರೂಪ ಪಡೆಯುತ್ತಿತ್ತು. ಈ ಭಾಗದಲ್ಲಿ ನಿತ್ಯ ಪ್ರತಿಭಟನೆ, ಧರಣಿ, ನ್ಯಾರ್ಯಾಗದ ಕಾರ್ಯಕಲಾಪಗಳಿಗೆ ಬಹಿಷ್ಕಾರ, ಕಪ್ಪು ಬಾವುಟ ಪ್ರದರ್ಶನ ಇವೆಲ್ಲವು ಸರ್ವೆ ಸಾಮಾನ್ಯವಾಗಿತ್ತು. ಹೋರಾಟದ ಒಂದು ಭಾಗವಾದ ಸರ್ಕಿಟ್ ಪೀಠದ ವಿವಾದ ತಣ್ಣಾಗಾಗಿದ್ದು, ರಾಜ್ಯ ಸರಕಾರದ ಮುಂದೆ ಈಗ ಹೈಕೋರ್ಟ್ ಪೀಠ ಸ್ಥಾಪನೆಯ ಸವಾಲು ಎದ್ದು ನಿಂತಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications