ಭಾರತದವಿಜ್ಞಾನಿ ಕಸ್ತೂರಿರಂಗನ್‌ಗೆ ಪ್ರತಿಷ್ಠಿತಅಂತರರಾಷ್ಟ್ರೀಯ ಪ್ರಶಸ್ತಿ
ಭಾರತದವಿಜ್ಞಾನಿ ಕಸ್ತೂರಿರಂಗನ್‌ಗೆ ಪ್ರತಿಷ್ಠಿತಅಂತರರಾಷ್ಟ್ರೀಯ ಪ್ರಶಸ್ತಿ
ಬಾಹ್ಯಾಕಾಶ ಸಾಧನೆಗೆ ಸಂದ ಗೌರವ ಪುರಸ್ಕಾರ
ಪ್ರತಿಷ್ಠಿತ ಆಲನ್ ಡಿ ಎಮಿಲ್ ಸ್ಮಾರಕ ಪ್ರಶಸ್ತಿ ಭಾರತೀಯ ವಿಜ್ಞಾನಿಯ ಮಡಿಲಿಗೆ ಬಿದ್ದಿದೆ. ಕೆನಡಾದಲ್ಲಿ ಅಕ್ಟೋಬರ್ 8 ರಂದು ನಡೆದ 55ನೇ ಅಂತರರಾಷ್ಟ್ರೀಯ ಆಸ್ಟ್ರೋನಾಟಿಕಲ್ ಸಮಾವೇಶದಲ್ಲಿ ಕಸ್ತೂರಿ ರಂಗನ್‌ಗೆ ಫೆಡರೇಷನ್ ಅಧ್ಯಕ್ಷ ಮಾರಿಕೋ ಬಾರ್ಬೋಸ್ ಪ್ರಶಸ್ತಿ ವಿತರಿಸಿದರು.
ಭಾರತೀಯ ಬಾಹ್ಯಕಾಶ ಕ್ಷೇತ್ರಕ್ಕೆ ಕಸ್ತೂರಿ ರಂಗನ್ ಸೇವೆ ಅನನ್ಯ. ಇಂಟರ್ ನ್ಯಾಷನಲ್ ಆಸ್ಟ್ರೋನಾಟಿಕ್ಸ್‌ನ ಸದಸ್ಯರಾಗಿ, ಇಂಟರ್‌ನ್ಯಾಷನಲ್ ಕಮಿಟಿ ಆನ್ ಅರ್ತ್ ಅಬ್ಸರ್ವೇಷನ್ ಸಂಸ್ಥೆಯ ಅಧ್ಯಕ್ಷರಾಗಿ ಅವರು ಗಣನೀಯ ಸೇವೆಯನ್ನು ಸಲ್ಲಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications