ಕನ್ನಡದ ಕಡೆಗಣನೆ : ಹತ್ತು ಅಧಿಕಾರಿಗಳ ವಿರುದ್ಧ ಇದಿನಬ್ಬ ದೂರು ಪತ್ರ
ಕನ್ನಡದ ಕಡೆಗಣನೆ : ಹತ್ತು ಅಧಿಕಾರಿಗಳ ವಿರುದ್ಧ ಇದಿನಬ್ಬ ದೂರು ಪತ್ರ
ಸಾರಿಗೆ, ವಾಣಿಜ್ಯತೆರಿಗೆ, ಕೆಪಿಟಿಸಿಎಲ್, ಭೂಸೇನಾ ನಿಗಮದಲ್ಲಿ ಕನ್ನಡ ಮೂಲೆಗುಂಪು
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಇಲಾಖೆಯ ಮುಖ್ಯಸ್ಥರು ಕನ್ನಡ ಬಳಸದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿ, ವಾಗ್ಡಂಡನೆ ವಿಧಿಸ ಬಹುದು. ಅಲ್ಲದೇ ಮುಂದಿನ ಐದು ವರ್ಷಗಳವರೆಗೆ ತಪ್ಪಿತಸ್ಥ ಅಧಿಕಾರಿಗಳ ಬಡ್ತಿಗೆ ಕತ್ತರಿ ಹಾಕುವ ಅವಕಾಶಗಳಿವೆ ಎಂದರು.
ಈ ಹಿಂದೆ ಕನ್ನಡವನ್ನು ನಿರ್ಲಕ್ಷ್ಯಮಾಡಿದ ರಾಜ್ಯದ 82 ಅಧಿಕಾರಿಗಳ ಗುರ್ತಿಸಿ, ಸರಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರ ಈ ಬಗೆಗೆ ಸ್ಪಂದಿಸುತ್ತಿಲ್ಲ. ದಂಡ ಪ್ರಯೋಗದ ಅಧಿಕಾರವನ್ನು ಸರಕಾರ ಪ್ರಾಧಿಕಾರಕ್ಕೆ ನೀಡಬೇಕು ಎಂದು ಇದಿನಬ್ಬ ಒತ್ತಾಯಿಸಿದರು.
ಕನ್ನಡ ಮಾಯ : ರಾಜ್ಯದ ಕೆಲವು ಇಲಾಖೆಗಳಲ್ಲಿ ಶೇ.90 ರಷ್ಟು ವ್ಯವಹಾರಗಳು ಇಂಗ್ಲೀಷ್‌ನಲ್ಲಿಯೇ ನಡೆಯುತ್ತಿವೆ. ವಿಶೇಷವಾಗಿ ಸಾರಿಗೆ, ವಾಣಿಜ್ಯತೆರಿಗೆ, ಕೆಪಿಟಿಸಿಎಲ್, ಭೂಸೇನಾ ನಿಗಮದಲ್ಲಿ ಕನ್ನಡವನ್ನು ಮೂಲೆಗುಂಪು ಮಾಡಲಾಗಿದೆ. ಕನ್ನಡ ನಾಮಫಲಕಗಳ ಬಳಸದವರ ಮೇಲೆ ದೂರುಗಳು ಬಂದರೆ ಕ್ರಮಜರುಗಿಸಲಾಗುತ್ತದೆ. ಮದ್ರಸಾಗಳಲ್ಲಿ ಕನ್ನಡದಲ್ಲೇ ಬೋಧನೆ ಮಾಡಬೇಕೆಂದು ಪತ್ರ ಬರೆಯಲಾಗಿದೆ ಎಂದು ಇದಿನಬ್ಬ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications