ವೀರಪ್ಪನ್‌ಗೆ ಕ್ಷಮೆ ನೀಡಿ -ಸಾಂಗ್ಲಿಯಾನ ; ಸಾಧ್ಯವಿಲ್ಲ -ಸಿದ್ಧರಾಮಯ್ಯ
ವೀರಪ್ಪನ್‌ಗೆ ಕ್ಷಮೆ ನೀಡಿ -ಸಾಂಗ್ಲಿಯಾನ ; ಸಾಧ್ಯವಿಲ್ಲ -ಸಿದ್ಧರಾಮಯ್ಯ
ನರಹಂತಕನ ಬಂಧನ ಅಸಾಧ್ಯ... ಪೋಲೀಸರ ವ್ಯರ್ಥ ಪ್ರಯತ್ನ ನಿಲ್ಲಲಿ
ಬೀದರ್ ಚುನಾವಣೆಯ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವೀರಪ್ಪನ್ ಚಟುವಟಿಕೆಗಳ ವ್ಯಾಪ್ತಿ ಸಾಕಷ್ಟು ವಿಸ್ತಾರಗೊಂಡಿದೆ. 22 ಸಾವಿರ ಚದರ ಮೈಲಿಗಳ ಅರಣ್ಯವು ಕರ್ನಾಟಕ ಹಾಗೂ ತಮಿಳುನಾಡು ನಡುವೆ ಹಂಚಿ ಹೋಗಿದೆ. ಅರಣ್ಯದ ಅಳ ಅಗಲ ಎಲ್ಲವನ್ನು ಬಲ್ಲ ವೀರಪ್ಪನ್ ಬಂಧನಕ್ಕೆ ಸ್ಥಳೀಯರ ಸಹಕಾರ ಅತ್ಯಗತ್ಯ. ಅದರೆ ವೀರಪ್ಪನ್ ಬಗೆಗೆ ಅಲ್ಲಿನ ಜನ ಯಾವ ಮಾಹಿತಿ ನೀಡುತ್ತಿಲ್ಲ. ಪೋಲೀಸರ ಕಾರ್ಯಾಚರಣೆಯಿಂದ ಪ್ರಯೋಜನವಿಲ್ಲ.
ಹೀಗಾಗಿ ಪೂಲನ್ ದೇವಿಗೆ ನೀಡಿದಂತೆ ವೀರಪ್ಪನ್‌ಗೂ ಸಹಾ ಕ್ಷಮಾದಾನ ನೀಡಿ, ಸಾರ್ವಜನಿಕ ಬದುಕನ್ನು ನಡೆಸಲು ಅವಕಾಶ ಕಲ್ಪಿಸ ಬೇಕಾಗಿದೆ. ಈ ಬಗೆಗೆ ಸರಕಾರ ಸಂಧಾನದ ಕಾರ್ಯತಂತ್ರ ರೂಪಿಸಬೇಕು ಎಂದು ಸಾಂಗ್ಲಿಯಾನ ಹೇಳಿದರು.
ಕ್ಷಮೆ ಅಸಾಧ್ಯ : ಸಾಂಗ್ಲಿಯಾನ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ, ನರಹಂತಕ ವೀರಪ್ಪನ್‌ಗೆ ಕ್ಷಮೆ ನೀಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದಿದ್ದಾರೆ. ವೀರಪ್ಪನ್ ಶಿಕಾರಿ ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್












Click it and Unblock the Notifications