ರಾಮಕೃಷ್ಣ ಮಠದಿಂದ ಬಡ ಜನತೆಗೆ ಉಚಿತ ಆಸ್ಪತ್ರೆ ; ದೇಣಿಗೆಗೆ ಸ್ವಾಗತ

ರಾಮಕೃಷ್ಣ ಮಠದಿಂದ ಬಡ ಜನತೆಗೆ ಉಚಿತ ಆಸ್ಪತ್ರೆ ; ದೇಣಿಗೆಗೆ ಸ್ವಾಗತ
ಧಾರ್ಮಿಕ ಮುಖಿ ಮಠವೀಗ ಸಮಾಜಮುಖಿಯೂ ಹೌದು

ಬೆಂಗಳೂರು : ಶತಮಾನೋತ್ಸವದ ಸಂಭ್ರಮದಲ್ಲಿರುವ ರಾಮಕೃಷ್ಣ ಮಠದ ಅಲಸೂರು ಶಾಖೆ ಬಡವರಿಗೆ ಉಚಿತ ಚಿಕಿತ್ಸೆ ನೆರವು ಕಲ್ಪಿಸುವ ಉದ್ದೇಶದಿಂದ ಆಸ್ಪತ್ರೆಯಾಂದನ್ನು ಸ್ಥಾಪಿಸಲು ಉದ್ದೇಶಿಸಿದೆ.

ತನ್ನ ಬಿಡುವಿರದ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳಲು ರಾಮಕೃಷ್ಣ ಮಠ ನಿರ್ಧರಿಸಿದೆ. ಮಠದ ಸಾಮಾಜಿಕ ಚಟುವಟಿಕೆಗಳ ಅಂಗವಾಗಿ 1 ಕೋಟಿ ರುಪಾಯಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗುವುದು. ಇದರಲ್ಲಿ 50 ಲಕ್ಷ ರುಪಾಯಿಯನ್ನು ಕಟ್ಟಡದ ನಿರ್ಮಾಣಕ್ಕೆ ಹಾಗೂ ಉಳಿದ 50 ಲಕ್ಷ ರುಪಾಯಿಗಳನ್ನು ಉಪಕರಣಗಳ ಖರೀದಿಗೆ ಬಳಸಲಾಗುವುದು ಎಂದು ಮಠದ ಅಧ್ಯಕ್ಷ ಸ್ವಾಮಿ ರಾಘವೇಶಾನಂದರು ತಿಳಿಸಿದ್ದಾರೆ.

ಆಸ್ಪತ್ರೆಯ ನಿರ್ಮಾಣಕ್ಕೆ ದೇಣಿಗೆಗಳನ್ನು ರಾಮಕೃಷ್ಣ ಮಠ ಸ್ವಾಗತಿಸಿದೆ. ಈ ದೇಣಿಗೆಗೆ ತೆರಿಗೆ ವಿನಾಯಿತಿಯಿದೆ. ದೇಣಿಗೆ ನೀಡಲು ಬಯಸುವವರು ನಗದು /ಚೆಕ್‌/ ಡಿಡಿಗಳನ್ನು ರಾಮಕೃಷ್ಣ ಮಠ ಹೆಸರಿಗೆ ಕಳುಹಿಸಬಹುದು. ವಿಳಾಸ : ರಾಮಕೃಷ್ಣಮಠ, ಅಲಸೂರು, ಬೆಂಗಳೂರು-560 008. ಫೋನ್‌- (080) 25367878.

ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ, ಮಕ್ಕಳಿಗೆ ಹಾಲು ವಿತರಣೆ, ಉಚಿತ ನೇತ್ರ ಚಿಕಿತ್ಸಾ ಶಿಬಿರಗಳಂಥ ಚಟುವಲಟಿಕೆಗಳಧಿಲ್ಲೂ ರಾಮಕೃಷ್ಣ ಮಠ ತೊಡಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+