ರಜೆಗೆ ಸಜೆ : ತೆರೆದಿರುವುದು ಅಂಚೆ ಕಚೇರಿ ಬಾಗಿಲು ಭಾನುವಾರವೂ...

ರಜೆಗೆ ಸಜೆ : ತೆರೆದಿರುವುದು ಅಂಚೆ ಕಚೇರಿ ಬಾಗಿಲು ಭಾನುವಾರವೂ...
ಅಂಚೆಯಣ್ಣನ ಚೀಲದಲ್ಲಿ ಪತ್ರಗಳೊಂದಿಗೆ ಸ್ಟಾಂಪು, ಕಾರ್ಡ್‌, ಇತ್ಯಾದಿ.

ಬೆಂಗಳೂರು : ನಗರದ ಆಯ್ದ ಅಂಚೆ ಕಚೇರಿಗಳು ಇನ್ನು ಮುಂದೆ ವಾರವಿಡೀ ಕಾರ್ಯ ನಿರ್ವಹಿಸಲಿವೆ.

ಪ್ರಾಯೋಗಿಕವಾಗಿ ನಗರದ ಬಸವನಗುಡಿ, ಜಯನಗರ ಮುಖ್ಯ ಕಚೇರಿ, ಮಲ್ಲೇಶ್ವರಂ ಪಶ್ಚಿಮ, ಕೋರಮಂಗಲ ಮೊದಲ ಬ್ಲಾಕ್‌ ಮತ್ತು ಬ್ರಿಗೇಡ್‌ ರಸ್ತೆಯ ಅಂಚೆ ಕಚೇರಿಗಳು ವಾರದ ಎಲ್ಲಾ ದಿನ ಕಾರ್ಯ ನಿರ್ವಹಿಸಲಿವೆ ಎಂದು ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ.ಕೆ.ಬಿ.ಎಚ್‌. ನಾಯರ್‌ ತಿಳಿಸಿದ್ದಾರೆ.

ಅಂಚೆ ಇಲಾಖೆಗೆ 150 ವರ್ಷ ತುಂಬಿರುವ ಸವಿನೆನಪಿಗಾಗಿ ಕೆಲವು ನೂತನ ಸೇವೆಗಳನ್ನು ಆರಂಭಿಸಿದೆ. ಅವುಗಳೆಂದರೆ :

  • ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳನ್ನು ಕಳುಹಿಸುವವರ ಮನೆಬಾಗಿಲಿಗೇ ಬಂದು ಪತ್ರಗಳನ್ನು ಇಲಾಖೆ ಸಂಗ್ರಹಿಸಲಿದೆ. ಮಾಹಿತಿಗೆ ಸಂಪರ್ಕಿಸಿ -228686652.
  • ಪ್ರಧಾನ ಅಂಚೆ ಕಚೇರಿ (ಜಿಪಿಓ), ರಾಜಾಜಿನಗರ ಮತ್ತು ಬಸವನಗುಡಿ ಮುಖ್ಯ ಅಂಚೆ ಕಚೇರಿಗಳಲ್ಲಿ ಟಚ್‌ಸ್ಕಿೃೕನ್‌ ಕಿಯಾಸ್ಕ್‌ ಲಭ್ಯ.
  • ಗ್ರಾಹಕರು ಅಂಚೆಯಣ್ಣನಿಂದಲೇ ಪತ್ರ, ಅಂಚೆ ಚೀಟಿ, ಕಾರ್ಡ್‌ ಮತ್ತಿತರ ಅಂಚೆ ಸಾಮಗ್ರಿಗಳನ್ನು ಖರೀದಿಸ ಬಹುದು. ಹಿರಿಯ ನಾಗರಿಕರು ಮನವಿ ಮಾಡಿದಲ್ಲಿ ಅವರಿಂದ ಪತ್ರ ಸಂಗ್ರಹಿಸುವ ಸೌಲಭ್ಯವನ್ನು ಇಲಾಖೆ ಒದಗಿಸಲಿದೆ.
  • ಪ್ರಧಾನ ಅಂಚೆ ಕಚೇರಿಯಲ್ಲಿ ಮನಿ ಟ್ರಾನ್ಸ್‌ಫರ್‌ ಸೇವೆ ದಿನವಿಡೀ ಲಭ್ಯ. ಬಸವನಗುಡಿ, ಜಯನಗರ ಮುಖ್ಯ ಅಂಚೆ ಕಚೇರಿ, ಬ್ರಿಗೇಡ್‌ ರಸ್ತೆ, ಇಂದಿರಾ ನಗರ, ಫ್ರೇಜರ್‌ ಟೌನ್‌, ಕೋರಮಂಗಲ 6ನೇ ಬ್ಲಾಕ್‌, ಮ್ಯೂಸಿಯಂ ರಸ್ತೆಯ ಅಂಚೆ ಕಚೇರಿಗಳಲ್ಲಿ ರಾತ್ರಿ 8ರವರೆಗೆ ಈ ಸೌಲಭ್ಯ ಲಭ್ಯ.
  • ಎಲ್ಲಾ ಅಂಚೆ ಕಚೇರಿಗಳಲ್ಲಿ ದೂರವಾಣಿ ಬಿಲ್‌ ಪಾವತಿ ಮಾಡುವ ಅವಕಾಶ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+